ಲಖೀಂಪುರ್​​ಖೇರಿ ಹಿಂಸೆ ಆಕಸ್ಮಿಕವಲ್ಲ, ಪೂರ್ವನಿಯೋಜಿತ: ಎಸ್​ಐಟಿ

masthmagaa.com:
ಉತ್ತರ ಪ್ರದೇಶದ ಲಖೀಂಪುರ್​ ಖೇರಿ ಹಿಂಸಾಚಾರ ಕೇಸಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಅಂದು ನಡೆದ ‌ಘಟನೆ ಅಕಸ್ಮಿಕವಾಗಿ ನಡೆದಿಲ್ಲ.. ಇದು ರೈತರ ಹತ್ಯೆಗೆ ವ್ಯವಸ್ಥಿತವಾಗಿ ರೂಪಿಸಿದ್ದ ಸಂಚು ಅಂತ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಇವತ್ತು ಕೋರ್ಟ್​​ನಲ್ಲಿ ಹೇಳಿದೆ. ಈ ಪ್ರಕರಣದ ಮುಖ್ಯ ಆರೋಪಿಯಾದ ಕೇಂದ್ರ ಗೃಹ ರಾಜ್ಯಖಾತೆ ಸಚಿವ ಅಜಯ್ ಮಿಶ್ರಾ ಮಗ ಆಶೀಶ್ ಮಿಶ್ರಾ ಮತ್ತು ಇತರರ ವಿರುದ್ಧ ಯೋಜಿತ ಹತ್ಯೆಯ ಕೇಸ್ ದಾಖಲಿಸಬೇಕು. ಈಗ ದಾಖಲಿಸಿರೋ ಉದ್ದೇಶಪೂರ್ವಕವಲ್ಲದ ಹತ್ಯೆ ಕೇಸ್​​ನ್ನು ಬದಲಿಸಬೇಕು ಅಂತ ಎಸ್​ಐಟಿ ಮನವಿ ಮಾಡಿದೆ. ಅಂದಹಾಗೆ ಅಕ್ಟೋಬರ್ 3ರಂದು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ರೈತರ ಮೇಲೆ ಕಾರು ಹರಿಸಲಾಗಿತ್ತು. ಈ ಘಟನೆಯಲ್ಲಿ 8 ಮಂದಿ ಪ್ರಾಣ ಕಳ್ಕೊಂಡಿದ್ರು.
-masthmagaa.com

Contact Us for Advertisement

Leave a Reply