ದೇಶದಲ್ಲಿ ಭ್ರಷ್ಟಾಚಾರ, ಜಾತೀಯತೆ ಹಾಗೂ ಕೋಮುವಾದಕ್ಕೆ ಜಾಗವಿಲ್ಲ: PM ಮೋದಿ

masthmagaa.com:

ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಆಗ ದೇಶದಲ್ಲಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಕ್ಕೆ ನಮ್ಮ ರಾಷ್ಟ್ರೀಯ ಜೀವನದಲ್ಲಿ ಯಾವುದೇ ಸ್ಥಾನವಿರೋದಿಲ್ಲ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರುವ ಮೋದಿ, ಮಾರ್ಗದರ್ಶನಕ್ಕಾಗಿ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಭಾರತ ಯಾರ ಮಿತ್ರಕೂಟ ಅಥವಾ ಶತ್ರುಗಳ ಕೂಟದಲ್ಲಿಲ್ಲ. ಭಾರತ ಹಿಂದಿನಿಂದ ಅನುಸರಿಸಿಕೊಂಡು ಬರುತ್ತಿರುವ ಅಲಿಪ್ತ ನೀತಿಗೆ ಬದ್ಧವಾಗಿದೆ. ಈ ಕುರಿತಾಗಿ ಹಲವು ವರ್ಗಗಳಿಂದ ಟೀಕೆಗಳೂ ವ್ಯಕ್ತವಾಗಿದ್ದವು. ಅದರಲ್ಲೂ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಕಡಿಮೆ ಬೆಲೆಗೆ ರಷ್ಯಾದ ತೈಲ ಖರೀದಿ ಮಾಡುತ್ತಿರುವ ಭಾರತದ ನಿಲುವನ್ನೂ ಪ್ರಶ್ನಿಸಿದ್ದವು. ಆದರೆ, ಭಾರತ ತನ್ನ ನಿಲುವನ್ನು ಸ್ಪಷ್ಟವಾಗಿ ವಿಶ್ವದ ಎದುರು ಇಟ್ಟಿತ್ತು. ವಿಶ್ವದ ಪ್ರತಿಯೊಂದು ದೇಶವೂ ತನ್ನ ಪ್ರಜೆಗಳಿಗಾಗಿ ಉತ್ತಮ ನಿರ್ಣಯ ಕೈಗೊಳ್ಳುತ್ತದೆ. ಭಾರತ ಕೂಡಾ ತನ್ನ ನಿಲುವಿಗೆ ಬದ್ಧವಾಗಿದೆ ಅಂತ ಹೇಳಿದ್ದಾರೆ.
ಇತ್ತ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ NDA ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಅಂತ ವರದಿಯೊಂದು ಹೇಳಿದೆ. ಚುನಾವಣೆಯಲ್ಲಿ ಬಿಜೆಪಿ ಸುಮಾರು 251 ರಿಂದ 300 ಸ್ಥಾನಗಳನ್ನ ಗೆಲ್ಲುವ ಸಾಧ್ಯತೆಯಿದ್ದು, ವಿಪಕ್ಷಗಳ ಪ್ರಭಾವ ಅಷ್ಟೇನು ಇರೋದಿಲ್ಲ ಅಂತ ಅಮೆರಿಕ ಮೂಲದ ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್‌ ಕಂಪನಿ ಜೆಫರೀಸ್‌ ತನ್ನ ವರದಿಯಲ್ಲಿ ಹೇಳಿದೆ.

 

-masthmagaa.com

Contact Us for Advertisement

Leave a Reply