ಹೆಲೋ ಬಿಲ್ ಗೇಟ್ಸ್​​… ಅಫ್ಘಾನಿಸ್ತಾನಕ್ಕೆ ಹೆಲ್ಪ್ ಮಾಡಿ: ಇಮ್ರಾನ್ ಖಾನ್

masthmagaa.com:

ಪಾಕ್ ಪ್ರಧಾನಿ ಇಮ್ರಾನ್ ಖಾನ್​​​​ ಅಫ್ಘಾನಿಸ್ತಾನದ ಪರವಾಗಿ ನೆರವಿನ ಯಾಚನೆಯನ್ನು ಮುಂದುವರಿಸಿದ್ದಾರೆ. ಸಮಾಜ ಸೇವಕ, ಕೋಟಿ ಕುಳ ಬಿಲ್​ ಗೇಟ್ಸ್​ ಅಫ್ಘಾನಿಸ್ತಾನದ ಜನತೆಗೆ ಮಾನವೀಯ ನೆರವು ನೀಡಬೇಕ ಅಂತ ಮನವಿ ಮಾಡಿದ್ದಾರೆ. ಬಿಲ್​​ಗೇಟ್ಸ್​​ಗೆ ಕರೆ ಮಾಡಿ ಮಾತನಾಡಿರೋ ಇಮ್ರಾನ್ ಖಾನ್, ಪೋಲಿಯೋ ನಿರ್ಮೂಲನೆಯ ಪ್ರಯತ್ನದ ಬಗ್ಗೆ, ಪಾಕಿಸ್ತಾನಕ್ಕೆ ಬಿಲ್​ ಗೇಟ್ಸ್​​​​ರ ಮೆಲಿಂಡಾ ಫೌಂಡೇಷನ್ ನೀಡ್ತಿರೋ ಹಣಕಾಸು ನೆರವಿನ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ಅಫ್ಘಾನಿಸ್ತಾನದ ಅರ್ಧಕ್ಕಿಂತ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಅವರಿಗೆ ಹಣಕಾಸು ನೆರವಿನ ಅಗತ್ಯತೆ ಇದೆ. ಹೀಗಾಗಿ ನಿಮ್ಮ ಫೌಂಡೇಷನ್ ಕಡೆಯಿಂದ ಅಫ್ಘಾನಿಸ್ತಾನಕ್ಕೆ ನೆರವು ನೀಡಬೇಕು ಅಂತ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply