ಕೊರೊನಾ ಸೋಂಕು ಹೆಚ್ಚಳ! ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ!

masthmagaa.com:

ದೇಶದಲ್ಲಿ ನಿಧಾನಕ್ಕೆ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗ್ತಿದ್ದು ಪ್ರಧಾನಿ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹಾಗೂ ತಜ್ಚರ ಜೊತೆಗೆ ಮೀಟಿಂಗ್‌ ಮಾಡಲಾಗಿದೆ. ಈ ವೇಳೆ ಕೊರೊನಾ ಏರಿಕೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಆರೋಗ್ಯ ಸಚಿವಾಲಯ ದೇಶದ ಆರು ರಾಜ್ಯಗಳಿಗೆ ಅಂದ್ರೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್‌, ತಮಿಳುನಾಡು, ಕೇರಳ ರಾಜ್ಯಗಳಿಗೆ ಅಲರ್ಟ್‌ನಲ್ಲಿರುವಂತೆ ಮಾರ್ಗದರ್ಶನ ನೀಡಿತ್ತು. ಇದರ ನಡುವೆಯೇ ಈಗ ಪ್ರಧಾನಿಯವರೇ ಉನ್ನತ ಮಟ್ಟದ ಮೀಟಿಂಗ್‌ ಮಾಡಿದ್ದಾರೆ. ಇನ್ನು ಕಳೆದ 24 ಗಂಟೆಯಲ್ಲಿ ದೇಶದಲ್ಲಿ1,134 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಕೊರೊನಾದಿಂದ 5 ಮಂದಿ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ದೇಶದಲ್ಲಿ7,026 ಸಕ್ರಿಯ ಕೊರೊನಾ ಕೇಸ್‌ಗಳು ಇವೆ.

-masthmagaa.com

Contact Us for Advertisement

Leave a Reply