ಕೊರೋನಾ ಆತಂಕ, ಹೋಳಿ ಆಚರಿಸದಿರಲು ಮೋದಿ ನಿರ್ಧಾರ

masthmagaa.com:

ದೆಹಲಿ: ದೇಶದಲ್ಲಿ ಇದುವರೆಗೆ 6 ಮಂದಿಯಲ್ಲಿ ಕೊರೋನಾ ವೈರಸ್​ ಪತ್ತೆಯಾಗಿದೆ. ಇಟಲಿಯಿಂದ ದೆಹಲಿಗೆ ಬಂದಿದ್ದ 15 ಮಂದಿ ಪ್ರವಾಸಿಗರಲ್ಲೂ ವೈರಸ್​ ಪತ್ತೆಯಾಗಿದೆ ಅಂತ ಏಮ್ಸ್ ಹೇಳಿದೆ. ದೇಶದಾದ್ಯಂತ ಆತಂಕ ಹೆಚ್ಚಾಗಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಈ ಬಾರಿಯ ಹೋಳಿ ಹಬ್ಬದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಕೊರೋನಾ ವೈರಸ್​ ಹರಡದಂತೆ ತಡೆಯಲು ಗುಂಪು ಸೇರಬಾರದು ಅಂತ ತಜ್ಞರು ಹೇಳಿದ್ದಾರೆ. ಹೀಗಾಗಿ ಈ ವರ್ಷ ಯಾವುದೇ ಹೋಳಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಅಂತ ಹೇಳಿದ್ದಾರೆ.

-masthmagaa.com

https://twitter.com/narendramodi/status/1235083359501430789

Contact Us for Advertisement

Leave a Reply