‘ರಾಮ ಮಂದಿರ’ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟ ಪ್ರಧಾನಿ ಮೋದಿ

masthmagaa.com:

ಬರೋಬ್ಬರಿ 29 ವರ್ಷಗಳ ಬಳಿಕ ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಮೊದಲು ಹುನುಮಾನ್​ ಗಢಿ ದೇಗುಲಕ್ಕೆ ಭೇಟಿ ನೀಡಿದ್ರು. ಅಲ್ಲಿ ಹನುಮಾನ್ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಅವರು ಕಾಣಿಕೆ ಹಾಕಿದ್ರು. ಬಳಿಕ ಹನುಮಾನ್ ಗಢಿ ದೇಗುಲದ ಪ್ರಧಾನ ಅರ್ಚಕರು ಪ್ರಧಾನಿಗೆ ಬೆಳ್ಳಿ ಮುಕುಟ ಮತ್ತು ಶಾಲು ತೊಡಿಸಿದ್ರು.

ಅಲ್ಲಿಂದ ರಾಮ ಲಲ್ಲಾಗೆ ಭೇಟಿ ನೀಡಿ ಸಾಷ್ಟಾಂಗ ನಮಸ್ಕಾರ ಸಲ್ಲಿಸಿದ್ರು. ಜೊತೆಗೆ ರಾಮನ ವಿಗ್ರಹಕ್ಕೆ ಆರತಿ, ಹೂವಿನ ಹಾರ ಅರ್ಪಿಸಿ ನಮನ ಸಲ್ಲಿಸಿದ್ರು. ಅಲ್ಲೇ ಇಟ್ಟಿದ್ದ ಹುಂಡಿಗೆ ಕಾಣಿಕೆ ಹಾಕಿ ಮುಂದಕ್ಕೆ ಸಾಗಿದ ಪ್ರಧಾನಿ ಮೋದಿ ಪಾರಿಜಾತ ಗಿಡವನ್ನು ನೆಟ್ಟರು.

ಅಲ್ಲಿಂದ ಭೂಮಿ ಪೂಜೆಗೆ ನಿಗದಿಪಡಿಸಿದ ಸ್ಥಳದಲ್ಲಿ ಕೈಮುಗಿದ ಕುಳಿತು ಪೂಜೆಯ ವಿಧಿವಿಧಾನ ನೆರವೇರಿಸಿದ್ರು. ಬಳಿಕ 12.50ರ ಸುಮಾರಿಗೆ ಸಾಂಕೇತಿಕವಾಗಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟರು. ಪ್ರಧಾನಿಗೆ ಹತ್ತಿರದಲ್ಲಿ ಆರ್​ಆರ್​ಎಸ್​ ಸರಸಂಘಚಾಲಕ ಮೋಹನ್ ಭಾಗವತ್, ಅವರ ಪಕ್ಕದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಅವರ ಪಕ್ಕದಲ್ಲಿ ಉತ್ತರಪ್ರದೇಶ ರಾಜ್ಯಪಾಲೆ ಆನಂದಿಬೇನ್ ಪಟೇಲ್ ಕೂತಿದ್ದರು.

ರಾಮ ಮಂದಿರಕ್ಕಾಗಿ 1990ರಲ್ಲಿ ನಡೆದ ದೇಶವ್ಯಾಪಿ ಅಭಿಯಾನದ ಸಂಘಟಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರಾಗಿದ್ದರು. 90ರ ದಶಕದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ರಾಮ ಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ಕೈಗೊಂಡರು. ಡಿಸೆಂಬರ್ 6, 1992ರಲ್ಲಿ ಅಯೋಧ್ಯೆಯಲ್ಲಿ ಸೇರಿದ ಸಾವಿರಾರು ಕರಸೇವಕರು ವಿವಾದಿತ ಪ್ರದೇಶದಲ್ಲಿದ್ದ ಬಾಬರಿ ಮಸೀದಿಯ ಗುಂಬಜ್ ಅನ್ನು ಕೆಡವಿ ಹಾಕಿದ್ದರು.

-masthmagaa.com

Contact Us for Advertisement

Leave a Reply