ಮಾಮಲ್ಲಾಪುರಂನ ಬೀಚ್ ಬಳಿ ಮೋದಿ ಸ್ವಚ್ಛತೆ ಮಂತ್ರ

ತಮಿಳುನಾಡಿನ ಚೆನ್ನೈನಲ್ಲೂ ಪ್ರಧಾನಿ ಮೋದಿಯವರ ಸ್ವಚ್ಛತಾ ಕಾರ್ಯ ಜೋರಾಗಿದೆ. ಇಂದು ಬೆಳಗ್ಗೆ ಎದ್ದು ಮಾಮಲ್ಲಾಪುರಂನ ಬೀಚ್ ಬಳಿ ತೆರಳಿರುವ ಪ್ರಧಾನಿ ಮೋದಿ ದೊಡ್ಡ ಬ್ಯಾಗ್ ಹಿಡಿದು, ಅರ್ಧ ಗಂಟೆವರೆಗೆ ಅಲ್ಲಿ ಬಿದಿದ್ದ ಕಸವನ್ನು ಕ್ಲೀನ್ ಮಾಡಿದ್ದಾರೆ. ನಂತರ ಅದನ್ನು ಅಲ್ಲೇ ಇದ್ದ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾರೆ. ಈ ಮೂಲಕ ಸ್ವಚ್ಚತೆ ಕುರಿತು ಮತ್ತೊಮ್ಮೆ ಭಾರತೀಯರಿಗೆ ಸಂದೇಶ ರವಾನಿಸಿದ್ದಾರೆ.

ಈ ಹಿಂದೆ ಅಮೆರಿಕಾಗೆ ತೆರಳಿದಾಗ ತಮ್ಮನ್ನು ಸ್ವಾಗತಿಸುವಾಗ ಕೆಳಗೆ ಬಿದ್ದ ಹೂವನ್ನು ಎತ್ತಿಕೊಡುವ ಮೂಲಕ ಪ್ರಧಾನಿನರೇಂದ್ರ ಮೋದಿ ಸ್ವಚ್ಛತೆಯ ಸಂದೇಶ ಸಾರಿದ್ದರು.

Contact Us for Advertisement

Leave a Reply