ʻಗಗನಯಾನʼ ಸಜ್ಜು! 4 ಭಾರತೀಯ ಗಗನಯಾತ್ರಿಗಳ ಆಯ್ಕೆ!

masthmagaa.com:

ಇಸ್ರೋದ ಮತ್ತೊಂದು ಕನಸು ʻಗಗನಯಾನʼ ಮಿಷನ್‌ ಇತ್ತೀಚೆಗಷ್ಟೇ ತನ್ನೆಲ್ಲಾ ಟೆಸ್ಟ್‌ಗಳಲ್ಲಿ ಪಾಸ್‌ ಆಗಿ ಸ್ಪೇಸ್‌ ಕಡೆ ಪ್ರಯಾಣ ಬೆಳೆಸೋಕೆ ರೆಡಿಯಾಗಿದೆ. ಈ ಮಿಷನ್‌ ಮೂಲಕ ಸ್ಪೇಸ್‌ಗೆ ಹಾರಾಟ ಮಾಡಲಿರೋ 4 ಭಾರತೀಯ ಗಗನಯಾತ್ರಿಗಳ ಹೆಸರನ್ನ ಪಿಎಂ ನರೇಂದ್ರ ಮೋದಿಯವ್ರು ಇದೀಗ ರಿವೀಲ್‌ ಮಾಡಿದ್ದಾರೆ. ಈ ಗಗನಯಾನ ಮಿಷನ್‌ನ, ಗ್ರೂಪ್‌ ಕ್ಯಾಪ್ಟನ್‌ ಪ್ರಶಾಂತ್‌ ಬಾಲಕೃಷ್ಣನ್‌ ನಾಯರ್‌, ಗ್ರೂಪ್‌ ಕ್ಯಾಪ್ಟನ್‌ ಅಜಿತ್‌ ಕೃಷ್ಣನ್‌, ಗ್ರೂಪ್‌ ಕ್ಯಾಪ್ಟನ್‌ ಅಂಗದ್‌ ಪ್ರತಾಪ್‌ ಮತ್ತು ವಿಂಗ್‌ ಕಮಾಂಡರ್‌ ಶುಭಂಶು ಶುಕ್ಲಾ ಅವ್ರು ಸೆಲೆಕ್ಟ್‌ ಆಗಿದ್ದಾರೆ. ಹೀಗಂತ ತಿರುವನಂತಪುರಂನಲ್ಲಿರೋ ವಿಕ್ರಮ್‌ ಸಾರಾಭಾಯಿ ಸ್ಪೇಸ್‌ ಸೆಂಟರ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡೋವಾಗ ಹೇಳಿದ್ದಾರೆ. ಜೊತೆಗ ಸೆಲೆಕ್ಟಾದ ನಾಲ್ಕು ಗಗನಯಾತ್ರಿಕರಿಗೆ ʻಆಸ್ಟ್ರೊನಾಟ್‌ ವಿಂಗ್ಸ್‌ʼ ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವ್ರು, ʻಬಾಹ್ಯಾಕಾಶದ ಬಗ್ಗೆ ಹೆಚ್ಚೆಚ್ಚು ಸ್ಟಡಿ ಮಾಡೋಕೆ 2035ರ ಒಳಗೆ ಭಾರತ ತನ್ನದೇ ಆದ…ಸ್ವಂತ ಸ್ಪೇಸ್‌ ಸ್ಟೇಷನ್‌ ಹೊಂದಲಿದೆ. ಆ ಟೈಮ್‌ಲ್ಲಿ ನಮ್ಮ ಸ್ವಂತ ರಾಕೆಟ್‌ ಮೂಲಕ ಭಾರತೀಯ ಗಗನಯಾತ್ರಿ ಚಂದ್ರನ ಮೇಲೆ ಲ್ಯಾಂಡ್‌ ಮಾಡ್ತಾರೆʼ ಅಂತ ಕಾನ್ಫಿಡೆನ್ಸ್‌ನಿಂದ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply