ಕಾಂಗ್ರೆಸ್‌ PFI ಸಂಘಟನೆಯ ಸಹಾಯ ಪಡೀತಿದೆ: ಪ್ರಧಾನಿ ಮೋದಿ

masthmagaa.com:

ಕರ್ನಾಟಕದ ಬೆಳಗಾವಿಯಲ್ಲಿ ಪ್ರಚಾರ ನಡೆಸಿರೋ ಪ್ರಧಾನಿ ಮೋದಿಯವ್ರು ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಜನರ ವೋಟ್‌ ಗೆಲ್ಲೋಕೆ ಕಾಂಗ್ರೆಸ್‌ ಬ್ಯಾನ್‌ ಆಗಿರೋ… ಭಯೋತ್ಪಾದನೆಗೆ ಸಪೋರ್ಟ್‌ ಮಾಡೋ PFI ಸಂಘಟನೆಯ ಸಹಾಯ ಪಡೀತಿದೆ ಅಂತ ಆರೋಪಿಸಿದ್ದಾರೆ. ಸಭೆಯನ್ನ‌ ಉದ್ದೇಶಿಸಿ ಮಾತನಾಡಿದ ಮೋದಿಯವ್ರು, ಪುನಃ ಪಿತ್ರಾರ್ಜಿತ ಆಸ್ತಿ ಸಂಬಂಧ ಕಾಂಗ್ರೆಸ್‌ ಮೇಲೆ ಕಿಡಕಾರಿದ್ರು ʻಕಾಂಗ್ರೆಸ್‌ ಅವ್ರು ನಿಮ್ಮ ಆಸ್ತಿ, ಬ್ಯಾಂಕ್‌ ಲಾಕರ್‌, ಭೂಮಿ, ವಾಹನಗಳು, ಚಿನ್ನ ಮತ್ತು ಮಂಗಳಸೂತ್ರವನ್ನೂ ಬಿಡದೇ ಎಕ್ಸ್‌-ರೇ ಮಾಡ್ತಾರೆ. ನಿಮ್ಮ ಮನೆ ಮೇಲೆ ರೇಡ್‌ ಮಾಡಿ…ನಿಮ್ಮ ಆಸ್ತಿಗಳನ್ನೆಲ್ಲಾ ಕಿತ್ಕೋತಾರೆ. ಸೋ ನಾನು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡೋಕೆ ಬಯಸ್ತೀನಿ. ಈ ನಿಮ್ಮ ಉದ್ದೇಶವನ್ನ ಇಲ್ಲಿಗೆ ಬಿಟ್ಟುಬಿಡಿ. ಮೋದಿ ಬದುಕಿರೋ ತನಕ… ಇವೆಲ್ಲಾ ಆಗೋಕೆ ಸಾಧ್ಯವಿಲ್ಲ, ಇದಕ್ಕೆ ನಾನು ಬಿಡಲ್ಲ ಅಂತೇಳಿದ್ದಾರೆ. ಜೊತೆಗೆ ಶೆಹಜಾದಾ ಅಂದ್ರೆ ರಾಹುಲ್‌ ಗಾಂಧಿ ಮುಂಚೆ ರಾಜಮಹರಾಜರು ಭೂಮಿ ಕಿತ್ತಕೊಂಡ್ರು ಅಂತ ಆರೋಪ ಮಾಡಿದ್ರು. ಬರೋಡದ ರಾಜರ ಬಗ್ಗೆ ಅವರ ಕೊಡುಗೆ ಬಗ್ಗೆ ರಾಹುಲ್‌ ಗಾಂಧಿ ಹೇಳಲ್ಲ. ರಾಜಮಹರಾಜರು ಭೂಮಿ ಕಿತ್ಕೊಂಡ್ರು ಅಂತೇಳ್ತಾರೆ. ಆದ್ರೆ ನವಾಬರು, ಸುಲ್ತಾನರು ಮತ್ತು ಬಾದಶಹಗಳ ಬಗ್ಗೆ ಶೆಹಜಾದ ಅವರು ಮಾತಾಡಲ್ಲ. ಇದು ವೋಟ್‌ ಬ್ಯಾಂಕ್‌ ಪಾಲಿಟಿಕ್ಸ್‌ ಅಂತ ಮೋದಿ ರಾಹುಲ್‌ ವಿರುದ್ದ ಕಿಡಿಕಾರಿದ್ದಾರೆ. ಜೊತೆಗೆ ಇದು ಕಿತ್ತೂರು ರಾಣಿಚೆನ್ನಮ್ಮ, ಇನ್ನು ಹುಬ್ಬಳ್ಳಿಯ ನೇಹಾ ಕೇಸ್‌ಗೆ ಸಂಬಂಧಿಸಿ ಕೂಡ ಮೋದಿ ಮಾತನಾಡಿದ್ದಾರೆ. ʻನೇಹಾಳ ಫ್ಯಾಮಿಲಿ ಕ್ರಮ ತೆಗೆದುಕೊಳ್ಳಲು ಮುಂದಾಯ್ತು. ಆದ್ರೆ ಕಾಂಗ್ರೆಸ್‌ ಮಾತ್ರ ಈ ಮ್ಯಾಟರ್‌ನ್ನ ತಣ್ಣಗಾಗಿಸೋಕೆ ಟ್ರೈ ಮಾಡಿದೆ. ಕಾಂಗ್ರೆಸ್‌ಗೆ ನೇಹಾಳರಂತಹ ಹೆಣ್ಣುಮಗಳ ಜೀವಕ್ಕೆ ಬೆಲೆನೇ ಇಲ್ಲ. ಬೆಂಗಳೂರು ಕೆಫೆ ಸ್ಪೋಟದಲ್ಲೂ ಪ್ರಾರಂಭದಲ್ಲಿ ಕಾಂಗ್ರೆಸ್‌ ಸರ್ಕಾರ ಸೀರಿಯಸ್‌ ಆಗಿರಲಿಲ್ಲ. ಜಸ್ಟ್‌ ಸಿಲಿಂಡರ್‌ ಸ್ಫೋಟ ಅಷ್ಟೇ ಅಂತೇಳಿದ್ರು. ವೋಟ್‌ಗಾಗಿ ಕಾಂಗ್ರೆಸ್‌ PFI ಸಂಘಟನೆಯ ಸಪೋರ್ಟ್‌ ಪಡೀತಿದೆ. ವೈನಾಡಿನ ಒಂದೇ ಒಂದು ಸೀಟ್‌ಗಾಗಿ ನೀವು PFI ಸಂಘಟನೆಗೆ ತಲೆ ಬಾಗ್ತೀರಾ?ʼ ಅಂತ ಪ್ರಶ್ನಿಸಿದ್ದಾರೆ. ಈ ಮೂಲಕ ಬ್ಯಾನ್‌ ಆಗಿರೋ ಸಂಘಟನೆಗೆ ಜೊತೆಗೆ ಕಾಂಗ್ರೆಸ್‌ಗೆ ಲಿಂಕ್‌ ಇದೆ ಅನ್ನೋ ರೀತಿ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply