masthmagaa.com:

ಕೊರೋನಾ ಲಸಿಕೆ ಬಗ್ಗೆ ಕೆಲವರಿಗೆ ಭಯ ಇರೋದು ಸಹಜ. ಲಸಿಕೆ ಹಾಕಿಸಿಕೊಂಡ ಮೇಲೆ ಏನಾದ್ರೂ ಸೈಡ್​ ಎಫೆಕ್ಟ್​ ಆಗುತ್ತಾ ಅನ್ನೋ ಹೆದರಿಕೆ ಇರುತ್ತೆ. ಜನರಿಗಿರುವ ಭಯವನ್ನ ಹೋಗಲಾಡಿಸಲು ಕೆಲ ದೇಶಗಳಲ್ಲಿ ಆ ದೇಶದ ಅಧ್ಯಕ್ಷರು, ಉಪಾಧ್ಯಕ್ಷರು, ರಾಷ್ಟ್ರಪತಿಗಳು, ಪ್ರಧಾನಿಗಳೇ ಮುಂದೆ ಬಂದು ಲಸಿಕೆ ಹಾಕಿಕೊಳ್ತಿದ್ದಾರೆ. ಇದಕ್ಕೆ ಸೌದಿ ಅರೇಬಿಯಾ, ಅಮೆರಿಕ ಮುಂತಾದ ದೇಶಗಳೇ ಉದಾಹರಣೆ. ಇದೀಗ ಭಾರತದಲ್ಲೂ ಪ್ರಧಾನಿ ನರೇಂದ್ರ ಮೋದಿಯೇ ಕೊರೋನಾ ಲಸಿಕೆಯ ಮೊದಲ ಡೋಸ್​ ಹಾಕಿಕೊಳ್ಳಬೇಕು ಅನ್ನೋ ಕೂಗು ಕೇಳಿಬಂದಿದೆ. ಈ ಬೇಡಿಕೆ ಇಟ್ಟಿರೋದು ಆರ್​ಜೆಡಿ ನಾಯಕ ಮತ್ತು ಲಾಲು ಪ್ರಸಾದ್​ ಯಾದವ್ ಅವರ ಪುತ್ರ ತೇಜ್​ ಪ್ರತಾಪ್​ ಯಾದವ್​. ಹೌದು, ಪ್ರಧಾನಿ ಮೋದಿ ಮೊದಲು ಲಸಿಕೆ ಹಾಕ್ಕೊಂಡ್ರೆ, ಬಳಿಕ ನಾವೂ ಕೂಡ ಹಾಕಿಸಿಕೊಳ್ತೀವಿ ಅಂತ ತೇಜ್​ ಪ್ರತಾಪ್ ಹೇಳಿದ್ದಾರೆ. ಆದ್ರೆ ಪ್ರಧಾನಿ ಮೋದಿ ಯಾವಾಗ ಲಸಿಕೆ ಹಾಕಿಸಿಕೊಳ್ತಾರೆ ಅನ್ನೋ ಬಗ್ಗೆ ಸ್ವತಃ ಪ್ರಧಾನಿಯಾಗಲೀ ಅಥವಾ ಪ್ರಧಾನ ಮಂತ್ರಿಗಳ ಕಚೇರಿಯಾಗಲೀ ಇದುವರೆಗೆ ಏನೂ ಮಾತನಾಡಿಲ್ಲ. ದೇಶದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಸೋ ಆರೋಗ್ಯ ಕಾರ್ಯಕರ್ತರ ಜೊತೆಗೆ ಮೋದಿ ಲಸಿಕೆ ತೆಗೆದುಕೊಳ್ತಾರಾ ಅಥವಾ ಸಾಮಾನ್ಯ ಜನರಿಗೆ ಲಸಿಕೆ ಹಾಕುವಾಗ ತಾವೂ ಕೂಡ ಲಸಿಕೆ ಹಾಕಿಸಿಕೊಳ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ. ನಿಮ್ಮ ಪ್ರಕಾರ ದೇಶದ ಪ್ರಧಾನಿಗಳು ಮೊದಲು ಲಸಿಕೆ ಹಾಕಿಸಿಕೊಳ್ಳಬೇಕಾ ಅಥವಾ ಜನಸಾಮಾನ್ಯರ ಜೊತೆ ಲಸಿಕೆ ಹಾಕಿಸಿಕೊಳ್ಳಬೇಕಾ ಅಂತ ಕಾಮೆಂಟ್ ಮಾಡಿ ತಿಳಿಸಿ.

-masthmagaa.com

Contact Us for Advertisement

Leave a Reply