masthmagaa.com:

ದೇಶದಲ್ಲಿ ಇಂದಿನಿಂದ ಕೊರೋನಾ ಲಸಿಕೆಯ ಎರಡನೇ ಹಂತದ ಅಭಿಯಾನ ಆರಂಭವಾಗಿರೋ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಲಸಿಕೆ ಚುಚ್ಚಿಸಿಕೊಂಡಿದ್ದಾರೆ. ಮೋದಿಗೆ ಭಾರತ್ ಬಯೋಟೆಕ್​ ಮತ್ತು ಐಸಿಎಂಆರ್ ಅಭಿವೃದ್ಧಿಪಡಿಸಿರೋ ‘ಕೋವಾಕ್ಸಿನ್​’ ಲಸಿಕೆಯ ಮೊದಲ ಡೋಸ್​ ಹಾಕಲಾಗಿದೆ. ಎರಡನೇ ಡೋಸನ್ನ ಮುಂದಿನ 28 ದಿನದಲ್ಲಿ ಕೊಡಲಾಗುತ್ತೆ. ಬೆಳ್ಳಂಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಹೋದ ಪ್ರಧಾನಿಗೆ ಇಬ್ಬರು ನರ್ಸ್​ಗಳು ಸೇರಿ ಲಸಿಕೆ ಚುಚ್ಚಿದ್ದಾರೆ. ಈ ವೇಳೆ ನರ್ಸ್ ಜೊತೆ ಮಾತನಾಡಿದ ಪ್ರಧಾನಿ ಮೋದಿ, ‘ಲಗಾ ಭಿ ದಿ, ಪತಾ ಹಿ ನಹಿ ಚಲಾ’ ಅಂತ ಹೇಳಿದ್ರು. ಅಂದ್ರೆ ಲಸಿಕೆ ಚುಚ್ಚಿದ್ರಾ, ನಂಗೆ ಗೊತ್ತೇ ಆಗ್ಲಿಲ್ಲ ಎಂದಿದ್ದಾರೆ. ಬಳಿಕ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರು ಮತ್ತು ವಿಜ್ಞಾನಿಗಳ ಕೊಡುಗೆಯನ್ನ ಪ್ರಶಂಸಿದ್ರು. ಜೊತೆಗೆ 60 ವರ್ಷ ಮೇಲ್ಪಟ್ಟವರು ಮತ್ತು ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರೋ 45 ವರ್ಷ ಮೇಲ್ಪಟ್ಟವರು ಲಸಿಕೆ ಚುಚ್ಚಿಸಿಕೊಳ್ಳಿ. ಎಲ್ಲರೂ ಸೇರಿ ಕೊರೋನಾವನ್ನ ಸೋಲಿಸೋಣ ಅಂತ ಹೇಳಿದ್ದಾರೆ. ಪ್ರಧಾನಿ ಮೋದಿಗೆ ಈಗ 70 ವರ್ಷ ವಯಸ್ಸು. ಸೋ 60 ವರ್ಷ ಮೇಲ್ಪಟ್ಟವರ ಏಜ್ ಬ್ರಾಕೆಟ್​ನಲ್ಲಿ ಮೋದಿ ಬರ್ತಾರೆ. ಈ ಹಿಂದೆ ಲಸಿಕೆ ಬಗ್ಗೆ ಮಾತನಾಡೋವಾಗ ಕೂಡ, ಎಲ್ಲರೂ ತಮ್ಮ ತಮ್ಮ ಸರದಿ ಬಂದಾಗಲೇ ಲಸಿಕೆ ಹಾಕ್ಕೊಳ್ಳಿ. ರಾಜಕಾರಣಿಗಳು ಅಂತ ಲೈನ್ ಜಂಪ್ ಮಾಡ್ಬೇಡಿ ಅಂತ ಹೇಳಿದ್ರು ಮೋದಿ. ಅದರಂತೆ ಇದೀಗ ತಮ್ಮ ಸರದಿ ಬರುತ್ತಿದ್ದಂತೇ ಮೊದಲಿಗರಾಗಿ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ಮತ್ತೊಂದು ವಿಚಾರ ಅಂದ್ರೆ ‘ಕೋವಾಕ್ಸಿನ್’ ಲಸಿಕೆ ಬಗ್ಗೆ ಸಾಕಷ್ಟು ವಿವಾದ ಇತ್ತು. ಮಾನವ ಪ್ರಯೋಗ ಮುಗಿಯೋ ಮೊದಲೇ ಅದಕ್ಕೆ ಅನುಮತಿ ನೀಡಲಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ವಿಪಕ್ಷಗಳು ಕೂಡ ಈ ಬಗ್ಗೆ ಪ್ರಶ್ನೆ ಮಾಡಿದ್ದವು. ಆದ್ರೀಗ ಅದೇ ಲಸಿಕೆಯನ್ನ ಪ್ರಧಾನಿ ಮೋದಿ ಚುಚ್ಚಿಸಿಕೊಳ್ಳೋ ಮೂಲಕ ಎಲ್ಲರಿಗೂ ಉತ್ತರ ಕೊಟ್ಟಿದ್ದಾರೆ. ಕೋವಾಕ್ಸಿನ್ ಲಸಿಕೆ ಸೇಫ್ ಅನ್ನೋ ಸಂದೇಶ ರವಾನಿಸಿದ್ದಾರೆ. ಇನ್ನು ರಾಜಕಾರಣಿಗಳು ಮುಂದೆ ಬಂದು ಲಸಿಕೆ ಹಾಕ್ಕೊಳ್ಳಬೇಕು. ಈ ಮೂಲಕ ಲಸಿಕೆ ಬಗ್ಗೆ ಜನರ ಭಯವನ್ನ ಹೋಗಲಾಡಿಸಬೇಕು ಅನ್ನೋ ಕೂಗು ಸಹ ಕೇಳಿ ಬಂದಿತ್ತು. ಇನ್ನು ಇವತ್ತು ಲಸಿಕೆ ಚುಚ್ಚಿಸಿಕೊಳ್ಳೋ ವೇಳೆ ಪ್ರಧಾನಿ ಮೋದಿ ಅಸ್ಸಾಂನ ಸ್ಕಾರ್ಫ್​ ಧರಿಸಿದ್ದರು. ಅಲ್ಲದೆ ಲಸಿಕೆ ಚುಚ್ಚಿದ ನರ್ಸ್​ಗಳು ಕೇರಳ ಮತ್ತು ಪುದುಚೆರಿಯವರು. ಈ ರಾಜ್ಯಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇನ್ನು ತಮ್ಮ ಲಸಿಕೆಯನ್ನ ಹಾಕಿಸಿಕೊಂಡಿದ್ದಕ್ಕೆ ಭಾರತ್​ ಬಯೋಟೆಕ್​ ಕಂಪನಿ ಸಂತಸ ವ್ಯಕ್ತಪಡಿಸಿದೆ. ಆತ್ಮನಿರ್ಭರ್ ಭಾರತ್ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರ ಬದ್ಧತೆ ಸ್ಪೂರ್ತಿದಾಯಕ. ಯೆಸ್​, ನಾವೆಲ್ಲರೂ ಕೊರೋನಾ ವಿರುದ್ಧ ಹೋರಾಡಿ ಗೆಲ್ಲಬೇಕು ಅಂತ ಭಾರತ್ ಬಯೋಟೆಕ್​ ಕಂಪನಿ ಹೇಳಿದೆ. ಮತ್ತೊಂದುಕಡೆ ಸಿಎಂ ಯಡಿಯೂರಪ್ಪ ಕೂಡ ಲಸಿಕೆ ಹಾಕಿಸಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ. ಅವರಿಗೀಗ 78 ವರ್ಷ ವಯಸ್ಸು.

-masthmagaa.com

Contact Us for Advertisement

Leave a Reply