ಸಿಎಂಗಳ ಜೊತೆ ಸೋಮವಾರ ಪ್ರಧಾನಿ ಮಾತುಕತೆ, ಜನಸಾಮಾನ್ಯರಿಗೂ ಫ್ರೀ ಲಸಿಕೆ?

masthmagaa.com:

ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ ಅಂತ ಮೂಲಗಳು ಹೇಳಿವೆ. ದೇಶದಲ್ಲಿ ಕೊರೋನಾ ಲಸಿಕೆಯ ಅಭಿಯಾನ ಶುರುವಾಗಲು ಕ್ಷಣಗಣನೆ ಆರಂಭವಾಗಿರೋ ನಡುವೆಯೇ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸ್ತಿರೋದು ಗಮನಾರ್ಹ. ಭಾರತದಲ್ಲಿ ಎರಡು ಲಸಿಕೆಗಳಿಗೆ DCGI ಅನುಮೋದನೆ ಕೊಟ್ಟ ಬಳಿಕ ಈ ಸಭೆ ನಡೀತಿರೋದು ಕೂಡ ಮಹತ್ವ ಪಡೆದಿದೆ. ಈ ಸಭೆಯಲ್ಲಿ ದೇಶದಲ್ಲಿ ಲಸಿಕೆ ಅಭಿಯಾನ ಶುರು ಮಾಡುವ ಬಗ್ಗೆ ಅಥವಾ ಜನಸಾಮಾನ್ಯರಿಗೆ ಲಸಿಕೆ ಹಾಕುವ ಬಗ್ಗೆ ಅಥವಾ ಲಸಿಕೆಯ ಬೆಲೆ ಸೇರಿದಂತೆ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಇವತ್ತು ಮಾತನಾಡುವಾಗ, ಇನ್ನು ಕೆಲವೇ ದಿನಗಳಲ್ಲಿ ಲಸಿಕೆ ವಿತರಣೆ ಆರಂಭವಾಗಲಿದೆ ಅಂತ ಹೇಳಿದ್ರು. ರಾಜ್ಯ ಆರೋಗ್ಯ ಸಚಿವರಾದ ಡಾ.ಕೆ. ಸುಧಾಕರ್, ಸೋಮವಾರವೇ ಲಸಿಕೆ ಅಭಿಯಾನ ಆರಂಭವಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply