ವಿಡಿಯೋ ಕಾನ್ಫರೆನ್ಸ್ ವೇಳೆ ಪ್ರಧಾನಿ ಮೋದಿ ಹೇಳಿದ್ದೇನು..?

masthmagaa.com:

ಕೊರೋನಾ ವೈರಸ್ ಹಾವಳಿ ಮುಂದಿನ ಹಲವು ತಿಂಗಳುಗಳ ಜನರನ್ನ ಕಾಡಲಿದೆ ಅಂತ ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಡಿಸಿದ್ದಾರೆ. ಲಾಕ್​ಡೌನ್ ತೆರೆದ ಬಳಿಕವೂ ಮಾಸ್ಕ್ ಧರಿಸುವುದು, ಮುಖವನ್ನು ಕವರ್ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ ಎಂಬ ಅರ್ಥದಲ್ಲಿ ಪ್ರಧಾನಿ ಮಾತನಾಡಿದ್ದಾರೆ.

ಅಂದರೆ ಸದ್ಯಕ್ಕೆ ಕಾಯಿಲೆ ಕಮ್ಮಿಯಾಗುತ್ತಾ ಬಂದರೂ, ಲಾಕ್​ಡೌನ್​ ತೆರೆದರೂ ಈ ವೈರಾಣು ನಾವು ಬದುಕುವ ರೀತಿ ಮೇಲೆ ದೂರಗಾಮಿ ಪರಿಣಾಮ ಬೀರುವುದು ಖಚಿತ. ಕಾಯಿಲೆ ತೊಲಗಿದ ನಂತರವೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅನಿವಾರ್ಯ. ಅಲ್ಲದೆ ಕಾಯಿಲೆ ವಿರುದ್ಧ ಹೋರಾಡಲು ಹೆಚ್ಚೆಚ್ಚು ಜನ ಆರೋಗ್ಯ ಸೇತು ಆ್ಯಪ್ ಬಳಸುಂತೆ ಉತ್ತೇಜಿಸಬೇಕು ಅಂತ ವಿವಿಧ ರಾಜ್ಯದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡುವಾಗ ಪ್ರಧಾನಿ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply