ಕಿವಿ ಬಿಟ್ಟು ಕೇಳಿ…ತಾಕತ್ ಇದ್ರೆ 370ನೇ ವಿಧಿ ವಾಪಸ್ ತನ್ನಿ: ಮೋದಿ ಸವಾಲ್

ಸಂವಿಧಾನದ 370ನೇ ವಿಧಿಯನ್ವಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಮತ್ತು ತ್ರಿವಳಿ ತಲಾಖ್ ಬಿಲ್ ವಿರುದ್ಧ ಮಾತನಾಡುವ ವಿಪಕ್ಷಗಳಿಗೆ ಪ್ರಧಾನಿ ಮೋದಿ ಒಂದು ಸವಾಲ್ ಎಸೆದಿದ್ದಾರೆ. ಮಹಾರಾಷ್ಟ್ರದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕೆಲವರು 370ನೇ ವಿಧಿ ರದ್ದತಿ ಮತ್ತು ತ್ರಿವಳಿ ತಲಾಖ್ ಬಿಲ್ ಜಾರಿ ವಿಚಾರವಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕಿವಿ ತೆರೆದುಕೊಂಡು ಕೇಳಿ, ನಿಮಗೆ ತಾಕತ್ತಿದ್ದರೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ. ನಿಮ್ಮ ಪ್ರಣಾಳಿಕೆಯಲ್ಲಿ ತ್ರಿವಳಿ ತಲಾಖ್ ಮತ್ತು ಸಂವಿಧಾನದ 370ನೇ ವಿಧಿಯನ್ನು ವಾಪಸ್ ತರುತ್ತೇವೆ ಎಂದು ತಿಳಿಸಿ ನೋಡೋಣ ಎಂದು ಸವಾಲ್ ಎಸೆದಿದ್ದಾರೆ.

ವಿಪಕ್ಷಗಳು ತಮ್ಮ ಮೊಸಳೆ ಕಣ್ಣೀರು ನಿಲ್ಲಿಸಬೇಕು. 370ನೇ ವಿಧಿಯನ್ನು ಯಾರಾದ್ರೂ ವಾಪಸ್ ತರ್ತೀರಾ..? ಒಂದು ವೇಳೆ ಪ್ರಯತ್ನಪಟ್ಟರೂ ಅದು ಸಾಧ್ಯವಿದೆಯಾ..? ಅವರದ್ದು ಈಗ ಏನೂ ನಡೆಯಲ್ಲ ಎಂದು ಗೊತ್ತಾಗಿ, ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದಿದ್ದಾರೆ.

Contact Us for Advertisement

Leave a Reply