ಗಾಂಧೀಜಿ ಕುರಿತ ಸಿನಿಮಾ ಮಾಡಿ.. ಬಾಲಿವುಡ್​​​​ಗೆ ಮೋದಿ ಮನವಿ

ದೆಹಲಿ ಪ್ರಧಾನಿ ಮೋದಿಯವರು ಬಾಲಿವುಡ್ ಕಲಾವಿದರನ್ನು ಭೇಟಿಯಾಗಿದ್ದಾರೆ. ಅಲ್ಲದೆ  ಮಹಾತ್ಮ ಗಾಂಧೀಜಿ ಮತ್ತು ಅವರ ಜೀವನ ಆಧಾರಿತ ಸಿನಿಮಾ ಮಾಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಬಾಲಿವುಡ್​​​ನ ಪ್ರಮುಖ ನಟರಾದ ಆಮಿರ್ ಖಾನ್, ಶಾರುಖ್ ಖಾನ್​​​​ ಸೇರಿದಂತೆ ಹಲವು ನಟ, ನಟಿಯರು ಉಪಸ್ಥಿತರಿದ್ದರು.

ಮಹಾತ್ಮ ಗಾಂಧೀಜಿ ಜೀವನ ಮತ್ತು ತತ್ವಗಳ ಬಗ್ಗೆ ಸಿನಿಮಾ ಮಾಡುವಂತೆ ಪ್ರೇರೇಪಿಸೋದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲಿ ಮೋದಿ ಭೇಟಿಯಾದ ಕಲಾವಿದರು, ಗಾಂಧೀಜಿ ಕುರಿತ ಕಾರ್ಯಕ್ರಮಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆಮಿರ್ ಖಾನ್​, ಬಾಪೂಜಿ ವಿಚಾರಧಾರೆಗಳ ಪ್ರಚಾರಕ್ಕೆ ಮೋದಿಯವರು ಶ್ರಮ ವಹಿಸುತ್ತಿರೋದನ್ನು ಪ್ರಶಂಸಿಸುತ್ತೇನೆ. ನಾವು ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತೇವೆ ಅಂತ ಪ್ರಧಾನಿ ಮೋದಿಗೆ ಭರವಸೆ ನೀಡುತ್ತೇನೆ ಅಂದ್ರು.

Contact Us for Advertisement

Leave a Reply