ಉಗ್ರರಿಂದ ಅಹಪರಣಕ್ಕೆ ಒಳಗಾಗಿದ್ದ ನನ್ 5 ವರ್ಷಗಳ ಬಳಿಕ ರಿಲೀಸ್!

masthmagaa.com:

ಜಿಹಾದಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ನನ್ ಗ್ಲೋರಿಯಾ ಸೆಸಿಲಿಯಾ ನರ್ವಾಯೇಜ್​​​ರನ್ನು ಬಿಡುಗಡೆಗೊಳಿಸಲಾಗಿದೆ. ಕ್ರೈಸ್ತ ಮಿಷನರಿಯಲ್ಲಿ ಕೆಲಸ ಮಾಡ್ತಿದ್ದ ಕೊಲಂಬಿಯಾ ಮೂಲದ ಇವರನ್ನು, ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ 2017ರ ಫೆಬ್ರವರಿ 7ರಂದು ಅಪಹರಣ ಮಾಡಲಾಗಿತ್ತು. ಅಲ್ಲಿಂದ ಈವರೆಗೆ ಸತತ 5 ವರ್ಷಗಳ ಕಾಲ ತಮ್ಮ ಬಳಿಯೇ ಇರಿಸಿಕೊಂಡಿದ್ದ ಜಿಸಿಐಎಂ ಅನ್ನೋ ಸಂಘಟನೆಗೆ ಸೇರಿದ ಉಗ್ರರು, ಕಿರುಕುಳ ನೀಡಿದ್ರು. ಬಲವಂತವಾಗಿ ಖುರಾನ್ ಓದುವಂತೆ ಮಾಡಿಸಿದ್ರು. ಸದ್ಯ ಸರ್ಕಾರ ಮಧ್ಯಪ್ರವೇಶಿಸಿ ಸಂಘಟನೆಯ ನಾಯಕರೊಂದಿಗೆ ಮಾತನಾಡಿ, ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ನನ್ ಗ್ಲೋರಿಯಾ ನನ್ನ ಬಿಡುಗಡೆಗೆ ಪ್ರಯತ್ನಿಸಿದ ಮಾಲಿ ಅಧ್ಯಕ್ಷ ಮತ್ತು ಅಧಿಕಾರಿಗಳಿಗೆ ಧನ್ಯವಾದ ತಿಳಿಸಲು ಬಯಸ್ತೀನಿ ಅಂತ ಹೇಳಿದ್ದಾರೆ. ಸದ್ಯ ಅವರು ಕೊಲಂಬಿಯಾಗೆ ಮರಳಿದ್ದು, ಪೋಪ್​ ಫ್ರಾನ್ಸಿಸ್​ ಹೋಗಿ ಭೇಟಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply