ಆಕಾಶದಲ್ಲೇ ವಿಮಾನಗಳಿಗೆ ಇಂಧನ ತುಂಬಿಸುತ್ತೆ ಈ ಡ್ರೋನ್!

masthmagaa.com:

ಅಮೆರಿಕದ ನೌಕಾಪಡೆ ಒಂದು ಹೊಸ ತಂತ್ರಜ್ಞಾನವುಳ್ಳ ಡ್ರೋನ್​​ನ ಪರೀಕ್ಷೆ ನಡೆಸಿದೆ. ಇದು ವಿಮಾನ ಹಾರುತ್ತಿರುವಾಗಲೇ ಹೋಗಿ ಇಂಧನ ರೀಫಿಲ್ ಮಾಡೋ ಕೆಪಾಸಿಟಿ ಹೊಂದಿದೆ. ಜೂನ್ 4ನೇ ತಾರೀಕು ಇದನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. Boeing MQ-25 T1 ಅನ್ನೋ ಮಾನವ ರಹಿತ ಡ್ರೋನ್​​​, ಹಾರುತ್ತಿದ್ದ F/A-18 Super Hornet ಯುದ್ಧ ವಿಮಾನದ ಬಳಿ ಹೋಗಿ ಆಕಾಶದಲ್ಲೇ ಇಂಧನ ತುಂಬಿಸುವಲ್ಲಿ ಯಶಸ್ವಿಯಾಗಿದೆ. 2018ರಲ್ಲಿ ಈ ತಂತ್ರಜ್ಞಾನದ ಅಭಿವೃದ್ಧಿಗಾಗಿ ಬೋಯಿಂಗ್ ಕಂಪನಿಯ ಜೊತೆ ಅಮೆರಿಕ ಸ್ಟೇಟ್ ಡಿಪಾರ್ಟ್​​ಮೆಂಟ್ 805 ಮಿಲಿಯನ್ ಡಾಲರ್ ಅಂದ್ರೆ 6205 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು.

-masthmagaa.com

Contact Us for Advertisement

Leave a Reply