“ಅರ್ಥಹೀನ ಸಿನಿಮಾಗಳನ್ನ ಪ್ರಚಾರ ಮಾಡೋದೇ ದೊಡ್ಡ ಟ್ಯಾಲೆಂಟ್‌ ಆಗಿದೆ” : ವಿವೇಕ್‌ ಅಗ್ನಿಹೋತ್ರಿ !

masthmagaa.com:

ವಿವೇಕ್‌ ಅಗ್ನಿಹೋತ್ರಿ ಸಾಮಾನ್ಯವಾಗಿ ಬಾಲಿವುಡ್‌ ಬಗ್ಗೆ ಕೆಲವೊಂದು ಟೀಕೆಗಳನ್ನ ಮಾಡ್ತಾ ಇರ್ತಾರೆ.ಸಿನಿಮಾ ರಾಜಕೀಯದ ಬಗ್ಗೆಯೂ ಮಾತಾಡ್ತಾ ಇರ್ತಾರೆ. ಇದೀಗ ಮತ್ತೊಂದು ವಿಷಯದ ಬಗ್ಗೆ ಟ್ವಿಟ್ಟರ್‌ನಲ್ಲಿ ತಮ್ಮ ಅನಿಸಿಕೆಯನ್ನ ಬರೆದುಕೊಂಡಿದ್ದಾರೆ.

” ಜನರು ಕ್ರೌರ್ಯ ತುಂಬಿಕೊಂಡು ಹುಟ್ಟುವುದಿಲ್ಲ. ನಿಮ್ಮ ಮನಸ್ಸಿನಲ್ಲಿ ಶಾಂತಿ ತುಂಬಬೇಕಿದ್ದ ನಾಯಕರು ಜನಪ್ರಿಯ ಸಿನಿಮಾ, ಸಾಹಿತ್ಯ ಮತ್ತು ರಾಜಕೀಯದಲ್ಲಿ ಹಿಂಸೆಯನ್ನು ಆಕರ್ಷಕವಾಗಿಸುವ ಮೂಲಕ ನಿಮ್ಮ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇಂಥ ಕ್ರೂರ ಜಗತ್ತಿನಲ್ಲಿ ಸೃಜನಾತ್ಮಕ ಜಾಗೃತಿ ಮಾತ್ರವೇ ಪರಿಹಾರ. ಸಿನಿಮಾದಲ್ಲಿ ಅತಿಯಾದ ಹಿಂಸೆಯನ್ನು ವೈಭವೀಕರಿಸುವುದು ಕೂಡ ಈಗ ಟ್ಯಾಲೆಂಟ್​ ಎಂಬಂತೆ ಆಗಿದೆ. ಇಂಥ ಅರ್ಥಹೀನ ಸಿನಿಮಾವನ್ನು ಪ್ರಚಾರ ಮಾಡುವುದು ಮತ್ತು ನಟನಲ್ಲದ ವ್ಯಕ್ತಿಯನ್ನು ದೊಡ್ಡ ಸ್ಟಾರ್​ ರೀತಿ ಬಿಂಬಿಸುವುದು ದೊಡ್ಡ ಪ್ರತಿಭೆ ಎಂಬಂತಾಗಿದೆ. ಇನ್ನು, ಜನರನ್ನು ಅತೀ ದಡ್ಡರು ಎಂದು ಕರೆಯುವುದು ಕೂಡ ಎಲ್ಲಕ್ಕಿಂತ ದೊಡ್ಡ ಟ್ಯಾಲೆಂಟ್​ ಆಗಿದೆ” ಅಂತ ವಿವೇಕ್‌ ಅಗ್ನಿಹೋತ್ರಿ ಅವರು ಬರೆದುಕೊಂಡಿದ್ದಾರೆ. ಈ ಟ್ವೀಟ್‌ ಬಾರಿ ಚರ್ಚೆಗೆ ಕಾರಣ ಆಗಿದೆ. ಇನ್‌ಡೈರೆಕ್ಟ್‌ ಆಗಿ ಸಲಾರ್‌ ಸಿನಿಮಾದ ಬಗ್ಗೆನೇ ವಿವೇಕ್‌ ಅಗ್ನಿಹೋತ್ರಿ ಮಾತಾಡ್ತಾ ಇದ್ದಾರೆ ಅಂತ ಅಭಿಮಾನಿಗಳು ಸಹ ಕಾಮೆಂಟ್‌ ಮಾಡ್ತಾ ಇದ್ದಾರೆ.

-masthmagaa.com

 

Contact Us for Advertisement

Leave a Reply