ಶೋಯಬ್ ಅಖ್ತರ್ ಕರೆದು, ಮರ್ಯಾದೆ ಕಳೆದು, ಕೇಸೂ ಹಾಕಿದ PTV!

masthmagaa.com:

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ವಿರುದ್ಧ ಅಲ್ಲಿನ ಸರ್ಕಾರಿ ಸ್ವಾಮ್ಯದ ಪಿಟಿವಿ – ಪಾಕಿಸ್ತಾನ್​ ಟೆಲಿವಿಷನ್ ಕಾರ್ಪೊರೇಷನ್​ 10 ಕೋಟಿ ಮೊತ್ತದ ಮಾನನಷ್ಟ ಕೇಸ್​ ಹಾಕಿದೆ. ಅಂದ್ಹಾಗೆ ಕಳೆದ ತಿಂಗಳು ಪಿಟಿವಿಯಲ್ಲಿ ಪಾಕಿಸ್ತಾನ್​ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಟಿ-20 ವರ್ಲ್ಡ್​ ಕಪ್​ ಮ್ಯಾಚ್​ ಬಗ್ಗೆ ‘ಗೇಮ್​ ಆನ್​ ಹೆ’ ಕಾರ್ಯಕ್ರಮ ನಡೀತಿತ್ತು. ಈ ವೇಳೆ ಕಾರ್ಯಕ್ರಮದ ನಿರೂಪಕ ನೌಮಾನ್​ ನಿಯಾಝ್​, ನ್ಯೂಜಿಲೆಂಡ್​ ವಿರುದ್ಧ ಚೇಸ್​ ಮಾಡುವಲ್ಲಿ ಪಾಕಿಸ್ತಾನ ಏನಾದ್ರೂ ಗೊಂದಲ ಮಾಡಿಕೊಳ್ತಾ ಅಂತ ಕೇಳಿದ್ರು. ಈ ಪ್ರಶ್ನೆಯನ್ನ ಇಗ್ನೋರ್ ಮಾಡೋ ಅಖ್ತರ್​, ಪಾಕ್​ ವೇಗಿ ಹ್ಯಾರಿಸ್​ ರೌಫ್​​ ಬಗ್ಗೆ ಮಾತಾಡೋಕೆ ಶುರು ಮಾಡಿದ್ರು. ಆಗ ನಿರೂಪಕ ನೌಮಾನ್​ ನಿಯಾಝ್​ಗೆ ಸಿಟ್ಟು ಬಂದು ಲೈವ್​ನಲ್ಲೇ, ನೀವು ಸ್ವಲ್ಪ ಅಸಭ್ಯವಾಗಿ ವರ್ತಿಸಿದ್ದೀರಿ. ನೀವು ಹೆಚ್ಚು ಸ್ಮಾರ್ಟ್ ಅಂತ ಅನಿಸಿದ್ರೆ ನೀವು ಬೇಕಾದ್ರೆ ನೀವು ಹೋಗಬಹುದು ಅಂತ ಆನ್​ ಏರ್​​ನಲ್ಲೇ ಹೇಳ್ತಾರೆ. ಇದರ ಬೆನ್ನಲ್ಲೇ ಶೋಯೆಬ್​ ಅಖ್ತರ್​​ ಲೈವ್​​ನಲ್ಲೇ ಎದ್ದು ಹೋಗ್ತಾರೆ. ಈ ಕಾರ್ಯಕ್ರಮದಲ್ಲಿ ವೆಸ್ಟ್​ ಇಂಡೀಸ್​​ನ ಬ್ಯಾಟಿಂಗ್​ ಲೆಜೆಂಡ್​ ವಿವಿಯನ್ ರಿಚರ್ಡ್ಸ್ ಸೇರಿದಂತೆ ಹಲವರು ಭಾಗಿಯಾಗಿದ್ರು. ಇದೀಗ ಲೈವ್​ನಲ್ಲೇ ಎದ್ದು ಹೋದ ಅಖ್ತರ್​ ವಿರುದ್ಧ ಪಿಟಿವಿ ಮಾನನಷ್ಟ ಮೊಕದ್ದಮೆ ಹೂಡಿದೆ. ಅಖ್ತರ್​ ಒಪ್ಪಂದವನ್ನ ಮುರಿದಿದ್ದಾರೆ, ಸಡನ್​ ಆಗಿ ಹೀಗೆ ಮಾಡುವಂತಿಲ್ಲ, ಒಪ್ಪಂದದ ಪ್ರಕಾರ ಮೂರು ತಿಂಗಳ ನೋಟಿಸ್ ಪೀರಿಯಡ್​ ಇರುತ್ತೆ. ಅದನ್ನ ಮುಗಿಸಬೇಕು ಅಥವಾ ಮೂರು ತಿಂಗಳ ಸ್ಯಾಲರಿಯನ್ನ ಕೊಟ್ಟು ಹೋಗಬೇಕು. ಆದ್ರೆ ಅಖ್ತರ್ ಆನ್​ ಏರ್​​ನಲ್ಲೇ ಕಾರ್ಯಕ್ರಮ ಬಿಟ್ಟುಹೋಗಿದ್ದರಿಂದ ಪಿಟಿವಿಗೆ ಆರ್ಥಿಕವಾಗಿ ನಷ್ಟವಾಗಿದೆ. ಜೊತೆಗೆ ಟಿ-20 ವರ್ಲ್ಡ್ ಕಪ್​ ನಡೀತಿದ್ದಾಗ ದುಬೈನಲ್ಲಿ ನಮಗೆ ಹೇಳದೇ ಕೇಳದೆ ಹೋಗಿದ್ದಾರೆ. ಇಷ್ಟೇ ಅಲ್ಲದೆ ಭಾರತೀಯ ಟಿವಿಯೊಂದರಲ್ಲಿ ಹರ್ಭಜನ್​ ಸಿಂಗ್​ ಜೊತೆ ಕಾಣಿಸಿಕೊಂಡಿದ್ದಾರೆ. ಇದೆಲ್ಲಾ ಕಾರಣದಿಂದ ನಮಗೆ ಲಾಸ್​ ಆಗಿದೆ. ಹೀಗಾಗಿ ಅಖ್ತರ್​ ಈಗ ತಮ್ಮ ಮೂರು ತಿಂಗಳ ಸ್ಯಾಲರಿ ಆದ 33 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 10 ಕೋಟಿ ರೂಪಾಯಿ ಕೊಡ್ಬೇಕು ಅಂತ ಅಖ್ತರ್​ಗೆ ನೋಟಿಸ್​ ನೀಡಿದೆ. ಒಂದ್ವೇಳೆ ಕೊಡದೇ ಇದ್ದರೆ ಅಖ್ತರ್​ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಅಂತ ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply