ಅಮೆಜಾನ್​ನಲ್ಲಿ ರಾಸಾಯನಿಕ ಖರೀದಿಸಿ ಪುಲ್ವಾಮಾ ದಾಳಿಗೆ ಬಾಂಬ್..!

masthmagaa.com:

ಜಮ್ಮು ಕಾಶ್ಮೀರ: ಪುಲ್ವಾಮಾ ದಾಳಿ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇವರು ಅಮೆಜಾನ್ ಮೂಲಕ ಕೆಮಿಕಲ್ ತರಿಸಿಕೊಂಡು ಐಇಡಿ ಸಿದ್ಧಪಡಿಸಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಬಂಧಿತರನ್ನು ಶ್ರೀನಗರದ 19 ವರ್ಷದ ವೈಜ್ ಉಲ್ ಇಸ್ಲಾಂ ಮತ್ತು 32 ವರ್ಷದ ಮೊಹ್ಮದ್ ಅಬ್ಬಾಸ್ ರಾಥರ್ ಎಂದು ಗುರುತಿಸಲಾಗಿದೆ. ಈ ಮೂಲಕ ಕಳೆದೊಂದು ವಾರದಲ್ಲಿ ಪುಲ್ವಾಮಾ ಪ್ರಕರಣದಲ್ಲಿ ಐವರನ್ನು ಬಂಧಿಸಿದಂತಾಗಿದೆ.

ಪಾಕಿಸ್ತಾನ ಮೂಲದ ಜೈಷ್ ಎ ಮೊಹ್ಮದ್ ಸಂಘಟನೆಯ ನಿರ್ದೇಶನದಂತೆ ಐಇಡಿ ರೆಡಿ ಮಾಡಲು ಬೇಕಾದ ಕೆಮಿಕಲ್ಸ್​, ಬ್ಯಾಟರಿ ಮತ್ತು ಇತರೆ ವಸ್ತುಗಳನ್ನು ಅಮೆಜಾಮ್ ಮೂಲಕ ಆನ್​ಲೈನ್​ನಲ್ಲಿ ತರಿಸಲಾಗಿತ್ತು ಎಂದು ವಿಚಾರಣೆ ವೇಳೆ ವೈಜ್ ಉಲ್ ಇಸ್ಲಾಂ ಬಾಯಿಬಿಟ್ಟಿದ್ದಾನೆ. ಈತ ಆನ್​ಲೈನ್​​ನಲ್ಲಿ ವಸ್ತುಗಳನ್ನು ಖರೀದಿಸಿ ಉಗ್ರರಿಗೆ ನೀಡುತ್ತಿದ್ದ ಅನ್ನೋದು ಬಯಲಾಗಿದೆ.

masthmagaa.com:

Contact Us for Advertisement

Leave a Reply