ಪುನೀತ್ ಅವರ​ ಕೊನೇ ವಿಡಿಯೋ: ಪಿನ್​ ಟು ಪಿನ್​ ಡಿಟೇಲ್ಸ್

maasthmagaa.com:

ಪುನೀತ್​ ರಾಜ್​ಕುಮಾರ್​​ ಎಷ್ಟು ಚೆನ್ನಾಗಿದ್ರು, ಎಷ್ಟು ಆರೋಗ್ಯವಾಗಿದ್ರು. ಅಂತಹ ವ್ಯಕ್ತಿಗೆ​ ಹೃದಯ ಸ್ತಂಭನವಾಗಿ ಅವರು ನಮ್ಮಜೊತೆ ಇಲ್ಲವಾಗಿದ್ದಾರೆ ಅನ್ನೋದನ್ನ ಈಗಲೂ ಅರಗಿಸಿಕೊಳ್ಳೋಕೆ ಕಷ್ಟವಾಗ್ತಿದೆ. ಆದ್ರೂ ಅವರ ಸಾವಿಗೂ ಮುನ್ನ ನಡೆದ ಕೆಲವೊಂದು ಘಟನೆ, ಸಿಸಿ ಟಿವಿ ದೃಶ್ಯಗಳು ಸುದ್ದಿಯಾಗ್ತಿವೆ. ಅಕ್ಟೋಬರ್ 29ನೇ ತಾರೀಖು ಪುನೀತ್​ಗೆ ಚೆಸ್ಟ್ ಪೇನ್​ ಬಂದತಕ್ಷಣ ಫ್ಯಾಮಿಲಿ ಡಾಕ್ಟರ್​ ರಮಣರಾವ್​ ಅವರ ಕ್ಲಿನಿಕ್​ಗೆ ಹೋಗಿದ್ರು. ಮನೆಯಿಂದ ಕ್ಲಿನಿಕ್​ಗೆ ಹೊರಡುತ್ತಿರೋ ದೃಶ್ಯವೊಂದು ಪುನೀತ್​ ಅವರ ಮನೆಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಇದರಲ್ಲಿ ಪುನೀತ್​ ಸ್ಪಷ್ಟವಾಗಿ ಕಾಣ್ತಾರೆ. ಉಳಿದವರು ಸ್ಪಷ್ಟವಾಗಿ ಕಾಣಲ್ಲ. ಒಬ್ರು ಮಹಿಳೆ ಇದ್ದಾರೆ. ಬಹುಶಃ ಅವರು ಅಶ್ವಿನಿ ಇರಬಬಹುದು. ಸ್ಪಷ್ಟವಿಲ್ಲ. ಉಳಿದಂತೆ ಪುನೀತ್​ ಅವರ ಸಹಾಯಕರು, ಬಾಡಿಗಾರ್ಡ್ಸ್, ಡ್ರೈವರ್​ ಕಾಣ್ತಾರೆ. ವಿಡಿಯೋದಲ್ಲಿ ಮಹಿಳೆ ಡೋರ್ ಪಕ್ಕದಲ್ಲಿ ನಿಂತು ಒಳಗೆ ಹೋಗು ಅನ್ನೋರೀತಿ ಸಹಾಕನಿಗೆ ಸೂಚಿಸ್ತಾರೆ. ಆತ ಅರ್ಜೆಂಟ್​ ಅರ್ಜೆಂಟ್​​ನಲ್ಲಿ ಒಳಗೆ ಓಡಿ ಹೋಗ್ತಾನೆ. ಅವನ ಹಿಂದೆ ಮತ್ತೊಬ್ಬ ಹೋಗ್ತಾನೆ. ಅವನ ಹಿಂದೆ ಪುನೀತ್ ಅವರ ಬಾಡಿಗಾರ್ಡ್ ಡೋರ್ ಹತ್ರ ಹೋಗ್ತಾರೆ. ಅಷ್ಟರಲ್ಲಿ ಪುನೀತ್​​ ಹೊರಗೆ ಬರ್ತಾರೆ. ಬಾಡಿಗಾರ್ಡ್​ ಕೈ ತೋರಿಸಿ ನಮಸ್ಎ ಮಾಡ್ತಾರೆ. ಅದಕ್ಕೆ ಪುನೀತ್​ ಕೂಡ ಕೈ ತೋರಿಸಿ ನಮಸ್ತೆ ಅಂತಾರೆ. ಹೀಗೆ ಹೊರಗೆ ಬಂದ ಪುನೀತ್​ ಸೊಂಟದ ಮೇಲೆ ಬಲಗೈ ಇಟ್ಕೊಂಡು ಒಂದ್​ರೀತಿ ಸುಸ್ತಾದಂತೆ ಕಾಣ್ತಾರೆ. ಅವರು ಒಳಗೆ ಹೋಗಿದ್ದ ವ್ಯಕ್ತಿಯನ್ನ ಕಾಯ್ತಾ ಇದ್ರು. ಅಷ್ಟರಲ್ಲಿ ಒಳಗಿನಿಂದ ಓಡೋಡಿ ಬರೋ ಸಹಾಯಕ ಪುನೀತ್ ಅವರ ಮೊಬೈಲ್​ ಅನ್ನ ಅವರಿಗೆ ಕೊಡ್ತಾನೆ. ಅದನ್ನ ಹಿಡ್ಕೊಂಡ ಪುನೀತ್​ ಗೇಟ್​ ಹತ್ರ ನಿಲ್ಲಿಸಿದ್ದ ಕಾರ್ ಹತ್ರ ಹೆಜ್ಜೆ ಹಾಕ್ತಾರೆ. ಅವರನ್ನ ಉಳಿದವರು ಹಿಂಬಾಲಿಸ್ತಾರೆ. ಐವರಲ್ಲಿ ಮೂವರು ಕಾರ್​ ಹತ್ತುತ್ತಾರೆ. ಪುನೀತ್​, ಆ ಮಹಿಳೆ ಮತ್ತು ಡ್ರೈವರ್​. ಪುನೀತ್​ ಕಾರಿನ ಹಿಂಬದಿಯ ಲೆಫ್ಟ್ ಸೀಟಿನಲ್ಲಿ ಕೂತ್ರೆ, ಮಹಿಳೆ ರೈಟ್​ ಸೈಡಿನಲ್ಲಿ ಕೂರ್ತಾರೆ. ಡೋರ್​ ಎಲ್ಲಾ ಹಾಕ್ಕೋತಾರೆ. ಅಷ್ಟರಲ್ಲಿ ರೈಟ್​ ಸೈಡ್​ ಡೋರ್ ಓಪನ್ ಮಾಡೋ ಮಹಿಳೆ ಸಹಾಯಕನಿಗೆ ಏನೋ ಹೇಳ್ತಾರೆ. ಆತ ಓಕೆ ಓಕೆ ಅಂತ ತಲೆ ಅಲ್ಲಡಿಸ್ತಾನೆ. ಬಳಿಕ ಕಾರು ಅಲ್ಲಿಂದ ಹೊರಡುತ್ತೆ. ಇದೆಲ್ಲಾ ನಡೆದಿದ್ದು ಶುಕ್ರವಾರ ಬೆಳಗ್ಗೆ 11 ಗಂಟೆ ಒಂದು ನಿಮಿಷಕ್ಕೆ. ಇದು ಪುನೀತ್​ ಅವರು ರಮಣರಾವ್ ಕ್ಲಿನಿಕ್​ಗೆ ಹೋದ ದೃಶ್ಯ ಅಂತ ಹೆಳಲಾಗ್ತಿದೆ. ಬಟ್ ಡಾಕ್ಟರ್​ ರಮಣರಾವ್​ ಹೇಳಿದ ಪ್ರಕಾರ, ಅವತ್ತು ಪುನೀತ್ ಮತ್ತು ಪತ್ನಿ ಅಶ್ವಿನಿ ನಡ್ಕೊಂಡ್​ ಬಂದಿದ್ರು ಅಂತ ಹೇಳಿದ್ದರು. ಬಟ್​ ಈ ವಿಡಿಯೋ ಪ್ರಕಾರ ಹೇಳೋದಾದ್ರೆ ಪುನೀತ್​​ ಕಾರಲ್ಲಿ ಹೋದಂತೆ ಕಾಣ್ತಿದೆ. ಸೋ ಮನೆಯಿಂದ ಬೇರೆ ಎಲ್ಲಾದ್ರೂ ಹೋಗಿ, ನಂತ್ರ ರಮಣರಾವ್​ ಹತ್ರ ಹೋದ್ರಾ? ಅಥವಾ ರಮಣರಾವ್​ ಹೇಳಿದ್ದು ಕ್ಲಿನಿಕ್​ ಒಳಗೆ ನಡ್ಕೊಂಡು ಬಂದ್ರು ಅಂತಾನಾ ಅಥವಾ ಬೇರೆ ಏನಾದ್ರೂ ನಡೀತಾ? ಮತ್ತು ವಿಡಿಯೋದಲ್ಲಿರೋ ಮಹಿಳೆ ಅಶ್ವಿನಿ ಅವರಾ ಅನ್ನೋದು ಕೂಡ ಸ್ಪಷ್ಟವಿಲ್ಲ.

-masthmagaa.com

Contact Us for Advertisement

Leave a Reply