ಲಾರಿ ಚಾಲಕನನ್ನು ಗುಂಡಿಟ್ಟು ಕೊಂದು ಈರುಳ್ಳಿ ಲೂಟಿ..!

ಈರುಳ್ಳಿ ಬೆಲೆ ಏರಿಕೆ ಸಂದರ್ಭದಲ್ಲಿ ಈರುಳ್ಳಿ ಟ್ರಕ್ ಮಾಲೀಕನನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ. ಪಂಜಾಬ್‍ನ ಬಠಿಂಡಾದಲ್ಲಿ ಈ ಘಟನೆ ನಡೆದಿದೆ. ನಾಸಿಕ್‍ನಿಂದ 30 ಟನ್ ಹೊತ್ತಿದ್ದ ಟ್ರಕ್ ಬಟಿಂಡಾಗೆ ಹೊರಟಿತ್ತು. ಆದ್ರೆ ರಸ್ತೆ ಮಧ್ಯೆ ಅಡ್ಡಗಟ್ಟಿದ ದುಷ್ಕರ್ಮಿಗಳು ಲಾರಿ ಚಾಲಕನಿಗೆ ಗುಂಡು ಹಾರಿಸಿದ್ದಾರೆ. ನಂತರ ಈರುಳ್ಳಿಯನ್ನು ಲೂಟಿ ಮಾಡಿದ್ದಾರೆ.

ಮೊದಲಿಗೆ ರಾಮಪುರ ಸೇತುವೆ ಮತ್ತು ಲೂದಿಯಾನದಲ್ಲೂ ಟ್ರಕ್ ಅಡ್ಡನಿಲ್ಲಿಸಿ ಟ್ರಕ್ ನಿಲ್ಲಿಸಲು ಯತ್ನಿಸಲಾಗಿತ್ತು. ಆದ್ರೆ ಚಾಲಕ ನಿಲ್ಲಿಸಿರಲಿಲ್ಲ. ಹೀಗಾಗಿ ಬಟಿಂಡಾ ಬಳಿ ನಿಧಾನವಾಗಿ ಸಾಗುತ್ತಿದ್ದಾಗ ಲಾರಿಗೆ ನುಗ್ಗಿದ ದುಷ್ಕರ್ಮಿಗಳು, ಗುಂಡು ಹಾರಿಸಿದ್ದಾರೆ. ಈ ವೇಳೆ ಲಾರಿ ಮಾಲೀಕ ಕೂಡ ಪಕ್ಕದಲ್ಲೇ ಮಲಗಿದ್ದ. ಡ್ರೈವರ್ ಕೂಗಿ ಎಬ್ಬಿಸಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಡ್ರೈವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಕೂಡ ಆತ ಬದುಕುಳಿಯಲಿಲ್ಲ.

Contact Us for Advertisement

Leave a Reply