‘ರೈತರ ಪ್ರತಿಭಟನೆ ನಡುವೆ ಪಾಕ್​​ನಿಂದ ದುಡ್ಡು, ಶಸ್ತ್ರಾಸ್ತ್ರ, ಹೆರಾಯಿನ್ ರವಾನೆ’

masthmagaa.com:

ಪಂಜಾಬ್​: ರೈತರ ಪ್ರತಿಭಟನೆ ಶುರುವಾದಾಗಿನಿಂದ ಅಂದ್ರೆ ಅಕ್ಟೋಬರ್​​​ನಿಂದ ಪಕ್ಕದ ಪಾಕಿಸ್ತಾನದ ನಿರಂತರವಾಗಿ ದೇಶದೊಳಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಡ್ತಿದೆಯಂತೆ.. ಹೀಗಂತ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ಧಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಗಡಿ ದಾಟಿಸುತ್ತಿದೆ. ಬರೀ ಶಸ್ತ್ರಾಸ್ತ್ರ ಮಾತ್ರವಲ್ಲ. ದುಡ್ಡು ಮತ್ತು ಹೆರಾಯಿನ್​ನಂತಹ ಮಾದಕ ವಸ್ತುಗಳನ್ನು ಕೂಡ ಕಳುಹಿಸುತ್ತಿದೆ.  ಜೊತೆಗೆ ಗಡಿನುಸುಳಲು ಕಾರಣಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಪಾಕಿಸ್ತಾನ ಪಂಜಾಬ್​​ನಲ್ಲಿ ಏನಾದ್ರೂ ತೊಂದರೆ ಮಾಡಲು ಪ್ಲಾನ್ ಮಾಡುತ್ತಿರಬಹುದು ಅಂತ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.

ನಮ್ಮ ದೇಶ ಒಂದು ಕಡೆ ಪಾಕಿಸ್ತಾನ ಮತ್ತೊಂದು ಕಡೆ ಚೀನಾ ಜೊತೆ ಗಡಿ ಹಂಚಿಕೊಂಡಿದೆ. ಈಗ ಅವೆರಡೂ ದೇಶಗಳು ಒಂದಾಗಿವೆ. ಈ ಭಾಗದಲ್ಲಿ ಭಾರತ ಸೇನೆಯ ಶೇ.20ರಷ್ಟು ಸೈನಿಕರಿದ್ದು, ಅವರ ಸ್ಥೈರ್ಯ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಹೀಗಾಗಿ ನಾವು ಸುದ್ದಿಗಳನ್ನು ಪ್ರಸಾರ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು ಅಂತ ಕೂಡ ಹೇಳಿದ್ದಾರೆ. ಹಾಗಾದ್ರೆ ಜನವರಿ 26ರಂದು ದೆಹಲಿಯಲ್ಲಿ ನಡೆದ ಗಲಾಟೆಗೆ ಪಾಕಿಸ್ತಾನ ಕಾರಣನಾ ಅಂತ ಕೇಳಿದಾಗ, ಅದು ನನಗೆ ಗೊತ್ತಿಲ್ಲ.. ನಾನು ಯಾರನ್ನೂ ಹೊಣೆ ಮಾಡೋದಿಲ್ಲ.. ಅದನ್ನು ತನಿಖಾ ತಂಡಗಳು ಪತ್ತೆಹಚ್ಚಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply