ಚೀನಾ- ಅಮೆರಿಕ ನಡುವೆ ‘ಕೊರೋನಾ ಮೂಲ’ದ ಸಮರ!

masthmagaa.com:

ಜಿನೇವಾದಲ್ಲಿ ಪುಟಿನ್ ಭೇಟಿಯಾಗೋಕೆ ಹೋಗಿರೋ ಬೈಡೆನ್ ಇದೇ ವೇಳೆ ಚೀನಾ ವಿರುದ್ಧವೂ ಮುಗಿಬಿದ್ದಿದ್ದಾರೆ. ಚೀನಾ ಕೊರೋನಾ ಕಾಲದಲ್ಲಿ ಜಗತ್ತಿನ ಬೇರೆ ದೇಶಗಳಿಗೆ ಫ್ರೀ ಲಸಿಕೆ, ಪರಿಹಾರ ನೀಡೋ ಮೂಲಕ ಒಂದು ಜವಾಬ್ದಾರಿಯುತ ದೇಶ ಅಂತ ಬಿಂಬಿಸಿಕೊಳ್ಳಲು ಯತ್ನಿಸ್ತಿದೆ. ಆದ್ರೆ ಅದು ನಿಜವಾಗಿಯೂ ಕೊರೋನಾ ಮೂಲ ಪತ್ತೆಗೆ ಯತ್ನಿಸುತ್ತಿದೆಯಾ ಇಲ್ವಾ ಅನ್ನೋದು ಇನ್ನೂ ಕೂಡ ಗೊಂದಲದಲ್ಲೇ ಇದೆ ಅಂತ ಹೇಳಿದ್ದಾರೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನಕ್ಕೆ ಚೀನಾ ಸಹಕಾರ ಕೊಟ್ಟಿದೆ ಅಂತಲೂ ನನಗೆ ನಂಬಿಕೆ ಇಲ್ಲ ಅಂತ ಬೈಡೆನ್​​​​ ಹೇಳಿದ್ದಾರೆ. ಈ ನಡುವೆ 2019ರ ಡಿಸೆಂಬರ್​​​​​ನಲ್ಲೇ ಅಮೆರಿಕದಲ್ಲಿ ಕೊರೋನಾ ಬಂದಿತ್ತು ಅನ್ನೋದಕ್ಕೆ ಸಾಕ್ಷ್ಯ ಸಿಕ್ಕಿರೋದಕ್ಕೆ ಚೀನಾಗೆ ಫುಲ್ ಖುಷಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾದ ತಜ್ಞರು, ಕೊರೋನಾ ಮೂಲದ ಕುರಿತ ಮುಂದಿನ ಹಂತದ ತನಿಖೆಯನ್ನು ಅಮೆರಿಕಕ್ಕೆ ಶಿಫ್ಟ್ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply