ಝಿರ್ಕಾನ್​​ ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷೆ ಕೊನೆ ಹಂತಕ್ಕೆ: ರಷ್ಯಾ ಅಧ್ಯಕ್ಷ ಪುಟಿನ್

masthmagaa.com:

ಝಿರ್​​ಕಾನ್​ ಹೈಪರ್​ಸಾನಿಕ್ ಕ್ರೂಸ್​ ಮಿಸೈಲ್​ ಪರೀಕ್ಷೆ ಮುಗಿಯುವ ಹಂತ ತಲುಪಿದೆ. 2022ರಲ್ಲಿ ನೌಕಾಪಡೆಗೆ ಈ ಕ್ಷಿಪಣಿಗಳನ್ನು ಪೂರೈಸಲು ಶುರು ಮಾಡಲಾಗುತ್ತೆ ಅಂತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಸಬ್​ಮರೀನ್​ ಮತ್ತು ಯುದ್ಧ ನೌಕೆಯಿಂದ ಉಡಾವಣೆಯಾದ ಕ್ಷಿಪಣಿ ನೆಲದ ಮೇಲಿನ ಮತ್ತು ಆಕಾಶದಲ್ಲಿನ ಟಾರ್ಗೆಟ್​​ನ್ನು ರೀಚ್ ಆಗುವಲ್ಲಿ ಯಶಸ್ವಿಯಾಗಿದೆ ಅಂತ ಪುಟಿನ್ ಹೇಳಿದ್ದಾರೆ. ಜೊತೆಗೆ ಹೈಪರ್​ಸಾನಿಕ್ ಶಸ್ತ್ರಾಸ್ತ್ರ, ರೊಬೊಟಿಕ್ ವ್ಯವಸ್ಥೆಗಳನ್ನು ರಚಿಸಲು ಅಗತ್ಯವಾದ ತಂತ್ರಜ್ಞಾನಗಳು ತುಂಬಾ ಮುಖ್ಯವಾಗಿದೆ. ಯಾಕಂದ್ರೆ ಇವುಗಳಿಂದ ಮುಂದೆ ಎದುರಾಗಬಹುದಾದ ಮಿಲಿಟರಿ ಬೆದರಿಕೆಗಳನ್ನು ಎದುರಿಸಲು ಸಾಧ್ಯವಾಗುತ್ತೆ ಅಂತ ಪುಟಿನ್ ಹೇಳಿದ್ದಾರೆ. ಇನ್ನು ರಷ್ಯಾದ ಈ ನಡೆ ಕೂಡ ಅಮೆರಿಕ, ಚೀನಾ ಸೇರಿದಂತೆ ಇತರೆ ದೇಶಗಳ ಮುಂದಿನ ಜನರೇಷನ್​​ನ ಕ್ಷಿಪಣಿ ಅಭಿವೃದ್ಧಿ ರೇಸ್​ನ ಭಾಗವೇ ಆಗಿದೆ. ಕಳೆದ ತಿಂಗಳಷ್ಟೇ ಸಬ್​ಮರೀನ್​​​ನಿಂದ ಝಿರ್ಕಾನ್ ಕ್ಷಿಪಣಿಯ ಯಶಸ್ವೀ ಪರೀಕ್ಷೆ ನಡೆಸಿರೋದಾಗಿ ರಷ್ಯಾ ಹೇಳಿಕೊಂಡಿತ್ತು.

-masthmagaa.com

Contact Us for Advertisement

Leave a Reply