ಯುಕ್ರೇನ್ ಯುದ್ಧದಲ್ಲಿ ರಷ್ಯಾಗೆ ಅಮೆರಿಕ ಶಾಕ್! ಏನದು?

masthmagaa.com:

ರಷ್ಯಾ ಯುಕ್ರೇನ್ ಯುದ್ಧದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಯುಕ್ರೇನ್​ನಲ್ಲಿ ರಷ್ಯಾ ಮಾಡ್ತಿರೋ ಯುದ್ಧ ಅಪರಾಧಗಳ ಬಗ್ಗೆ ನಮಗೆ ಸರಿಯಾದ ಸಾಕ್ಷ್ಯ ಸಿಕ್ಕಿದೆ ಅಂತ ಅಮೆರಿಕದ ಪೆಂಟಗನ್ ತಿಳಿಸಿದೆ. ಜೊತೆಗೆ ಯುಕ್ರೇನ್ ರಕ್ಷಣೆಗಾಗಿ ಸೋವಿಯತ್ ಒಕ್ಕೂಟ ಕಾಲದ ಏರ್ ಡಿಫೆನ್ಸ್ ಸಿಸ್ಟಂಗಳನ್ನು ಕಳುಹಿಸ್ತಿದ್ದೀವಿ ಅಂತಲೂ ಮಾಹಿತಿ ನೀಡಿದೆ. ಈ ಮೂಲಕ ರಷ್ಯಾದ ವೆಪನ್​ಗಳನ್ನು ರಷ್ಯಾ ವಿರುದ್ಧದ ಯುದ್ಧಕ್ಕೇ ಕೊಟ್ಟು ಶಾಕ್ ಕೊಟ್ಟಿದೆ ಅಮೆರಿಕ.. ಕಳೆದ ವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತೊಂದು ಪ್ಯಾಕೇಜ್ ಶಸ್ತ್ರಾಸ್ತ್ರಗಳನ್ನು ಪೂರೈಸೋದಾಗಿ ಘೋಷಿಸಿದ್ರು. ಆದ್ರೆ ಅದು ಯಾವ ರೀತಿಯ ಶಸ್ತ್ರಾಸ್ತ್ರ ಅಂತ ಗೊತ್ತಿರಲಿಲ್ಲ. ಈಗ ಅದು ಬೇರೆ ಯಾವುದೂ ಅಲ್ಲ.. ಸೋವಿಯತ್ ಒಕ್ಕೂಟ ಕಾಲದ್ದು ಅಂತ ಗೊತ್ತಾಗಿದೆ. ಈ ಶಸ್ತ್ರಾಸ್ತ್ರಗಳು ಯುಕ್ರೇನ್​​ಗೂ ಚಿರಪರಿಚಿತವೇ ಆಗಿವೆ. ಯಾಕಂದ್ರೆ ಸೋವಿಯತ್ ಒಕ್ಕೂಟದಲ್ಲಿ ಯುಕ್ರೇನ್ ಕೂಡ ಇದ್ದಿದ್ದರಿಂದ ಅದ್ರಿಂದ ಸ್ವಾತಂತ್ರ್ಯ ಪಡೆದ ಬಳಿಕ ಯುಕ್ರೇನ್ ಆ ಶಸ್ತ್ರಾಸ್ತ್ರಗಳನ್ನು ಬಳಸುತ್ತಾ ಬಂದಿದೆ. ಶೀತಲ ಸಮರದ ಸಮಯದಲ್ಲಿ ಅಮೆರಿಕ ರಷ್ಯಾದ ಎಸ್​​-300 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಸೀಕ್ರೆಟ್ಟಾಗಿ ಕಲೆಕ್ಟ್ ಮಾಡ್ಕೊಂಡಿತ್ತು. ಆ ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಸ್ಟಡಿ ಮಾಡೋದು ಅದ್ರ ಉದ್ದೇಶವಾಗಿತ್ತು. ಇದೀಗ ಅವುಗಳನ್ನೇ ಯುಕ್ರೇನ್​​ಗೆ ನೀಡ್ತಾ ಇದೆ. ಕಳೆದ ವಾರ ಸ್ಲೊವಾಕಿಯಾ ಕೂಡ ಯುಕ್ರೇನ್​​ಗೆ ಎಸ್​​​​-300 ಕ್ಷಿಪಣಿ ವ್ಯವಸ್ಥೆ ನೀಡೋದಾಗಿ ಹೇಳಿತ್ತು. ಅಮೆರಿಕದ ಡಿಫೆನ್ಸ್ ಸೆಕ್ರೆಟರಿ ಲಾಯ್ಡ್ ಆಸ್ಟಿನ್ ಸ್ಲೊವಾಕಿಯಾಗೆ ಪ್ರವಾಸ ಕೈಗೊಂಡು ಈ ಕ್ಷಿಪಣಿ ವ್ಯವಸ್ಥೆಯನ್ನು ಯುಕ್ರೇನ್​ಗೆ ನೀಡುವಂತೆ, ಅದರ ಬದಲಿಯಾಗಿ ಅಮೆರಿಕ ಬೇರೆ ಕ್ಷಿಪಣಿ ವ್ಯವಸ್ಥೆ ನೀಡೋದಾಗಿ ಒಪ್ಪಂದ ಮಾಡ್ಕೊಂಡಿದ್ರು. ಇದ್ರ ಜೊತೆಗೆ ಎಸ್​​-8, ಮೊಬೈಲ್ ಲಾಂಚರ್​​ಗಳನ್ನು ಕೂಡ ಪೂರೈಸಿದೆ. ಇದು 20 ಮೈಲಿ ಅಂದ್ರೆ 30 ಕಿಲೋಮೀಟರ್ ದೂರದಲ್ಲಿರೋ ವಿಮಾನಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸೋ ಸಾಮರ್ಥ್ಯ ಹೊಂದಿದೆ.

-masthmagaa.com

Contact Us for Advertisement

Leave a Reply