ಕುತ್ತಿಗೆಗೆ ಸುತ್ತಿಕೊಂಡ ಹೆಬ್ಬಾವು..ಭಯಾನಕ ವಿಡಿಯೋ ನೋಡಿ..

ಕೇರಳ: ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡಿದೆ. ಇದ್ರಿಂದ ಸ್ವಲ್ಪ ಹೊತ್ತು ವ್ಯಕ್ತಿ ಪರದಾಡಬೇಕಾಯ್ತು. ನಂತರ ಇಬ್ಬರು ಮೂರು ಜನ ಸೇರಿಕೊಂಡು ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಹೆಬ್ಬಾವನ್ನು ತೆಗೆದಿದ್ದಾರೆ. 61 ವರ್ಷದ ಭುವನ ಚಂದ್ರನ್ ಎಂಬುವವರು ತಮ್ಮ ತಮ್ಮ ಸಹೋದ್ಯೋಗಿಗಳೊಡನೆ ತಿರುವನಂತಪುರಂನಲ್ಲಿ ಕೆಲ್ಸ ಮಾಡುತ್ತಿದ್ದರು. ಈ ವೇಳೆ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಆಗ ಭುವನಚಂದ್ರ ನಾಯರ್ ಎಂಬುವವರು ಹಿಡಿಯಲು ಮುಂದಾದ್ರು ಆದ್ರೆ ಅಷ್ಟರಲ್ಲಿ ಜಾರಿಕೊಂಡ ಹೆಬ್ಬಾವು ಅವರ ಕುತ್ತಿಗೆಯನ್ನು ಸುತ್ತಿಕೊಂಡಿತು. ನಂತರ ಅಲ್ಲಿದ್ದವರೆಲ್ಲರೂ ಸೇರಿಕೊಂಡು ಹಾವು ಹಿಡಿದಿದ್ದಾರೆ. ಭುವನಚಂದ್ರಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

Contact Us for Advertisement

Leave a Reply