ರಷ್ಯಾ-ಯುಕ್ರೇನ್ ಸಂಘರ್ಷ: ಯುದ್ಧ ವಿಮಾನ ಖರೀದಿಗೆ ಫಿನ್​ಲ್ಯಾಂಡ್ ನಿರ್ಧಾರ!

masthmagaa.com:
ಒಂದ್ಕಡೆ ತೈವಾನ್ ವಿಚಾರದಲ್ಲಿ ಚೀನಾ ವಿರೋಧಿಸ್ತಿರುವ ಅಮೆರಿಕ, ಅತ್ತ ರಷ್ಯಾ ವಿರುದ್ಧ ಯುಕ್ರೇನ್​​​​ಗೂ ಸಪೋರ್ಟ್​ ಮಾಡ್ತಿದೆ. ಜರ್ಮನಿಯ ಹೊಸ ಚಾನ್ಸಲರ್ ಓಲಫ್ ಸ್ಖೋಲ್ಜ್​​​ಗೆ ಕರೆ ಮಾಡಿ, ಯುಕ್ರೇನ್-ರಷ್ಯಾ ಗಡಿಯಲ್ಲಿನ ಸಂಘರ್ಷದ ಬಗ್ಗೆ ಚರ್ಚಿಸಿದ್ದಾರೆ. ಮತ್ತೊಂದ್ಕಡೆ ಯೂರೋಪಿಯನ್ ಯೂನಿಯನ್ ಕೂಡ ಯುಕ್ರೇನ್ ಅತಿಕ್ರಮಿಸಿದ್ರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಅಂತ ರಷ್ಯಾಗೆ ಎಚ್ಚರಿಸಿದೆ. ಆಕ್ರಮಣಕಾರಿ ನೀತಿಗೆ ಬೆಲೆ ತೆರಲೇಬೇಕಾಗುತ್ತೆ. ಹೀಗಾಗಿ ರಷ್ಯಾಗೆ ನಾವು ಮೊದಲೇ ಎಚ್ಚರಿಕೆ ನೀಡ್ತಿದ್ದೀವಿ ಅಂತ ಯೂರೋಪಿಯನ್ ಯೂನಿಯನ್ ಅಧ್ಯಕ್ಷೆ ಉರ್ಸುಲಾ ವೊನ್ ಡೆರ್ ಲೆಯೆನ್ ಹೇಳಿದ್ದಾರೆ. ಮತ್ತೊಂದ್ಕಡೆ ಯುಕ್ರೇನನನ್ನು ನ್ಯಾಟೋ ಅಂದ್ರೆ ನಾರ್ಥ್​ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್​​ಗೆ ಸೇರಿಸೋ ಎಲ್ಲಾ ಪ್ರಯತ್ನಗಳು ನಡೀತಿವೆ. ಹೀಗಾಗಿ ಪಾಶ್ಚಿಮಾತ್ಯ ದೇಶಗಳು ಯುಕ್ರೇನ್​​​​​ಗೆ ನ್ಯಾಟೋ ಸೇರುವಂತೆ ನೀಡಿರೋ ಆಹ್ವಾನವನ್ನು ಹಿಂಪಡೆಯಬೇಕು ಅಂತ ರಷ್ಯಾ ಆಗ್ರಹಿಸಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ನ್ಯಾಟೋ ಕಾರ್ಯದರ್ಶಿ ಸ್ಟೋಲನ್​​ಬರ್ಗ್​​​, ಯುಕ್ರೇನ್​​ ನ್ಯಾಟೋ ಸೇರಬೇಕಾ ಬೇಡ್ವಾ ಅನ್ನೋದನ್ನ ನ್ಯಾಟೋದ 30 ಸದಸ್ಯ ದೇಶಗಳು ಮತ್ತು ಯುಕ್ರೇನ್ ಸೇರಿ ನಿರ್ಧರಿಸುತ್ತವೆ. ಬೇರೆಯವರಲ್ಲ ಅಂತ ಹೇಳಿದ್ದಾರೆ.
ಮತ್ತೊಂದ್ಕಡೆ ಬಾಲ್ಟಿಕ್ ಸಮುದ್ರದಲ್ಲಿ ರಷ್ಯಾದ ಹಾವಳಿ ಹೆಚ್ಚುತ್ತಿರುವ ಬೆನ್ನಲ್ಲೇ ಫಿನ್​ಲ್ಯಾಂಡ್ ಅಮೆರಿಕದಿಂದ ಎಫ್ 35 ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. ಈ ವಿಮಾನಗಳು ಫಿನ್​ಲ್ಯಾಂಡ್ ಏರ್​ಫೋರ್ಸ್​​ನ ಹಳೆಯ ಎಫ್​ಎ 18 ಯುದ್ಧ ವಿಮಾನಗಳ ಜಾಗವನ್ನು ತುಂಬಲಿವೆ. ಅಮೆರಿಕದ ಶಸ್ತ್ರಾಸ್ತ್ರ ತಯಾರಿಕಾ ಕಂಪನಿ ಲಾಕ್​ಹೀಡ್​ ಮಾರ್ಟಿನ್​​ ಜೊತೆ 64 ಎಫ್​​​-35 ವಿಮಾನಗಳನ್ನು ಖರೀದಿಸಲು 9.4 ಬಿಲಿಯನ್ ಅಂದ್ರೆ 940 ಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಫಿನ್​​ಲ್ಯಾಂಡ್ ಸಹಿಹಾಕಿದೆ.
-masthmagaa.com

Contact Us for Advertisement

Leave a Reply