ಕ್ರಿಕೆಟ್ ಆಡಿದ ರಾಹುಲ್ ಗಾಂಧಿ..! ವಿಡಿಯೋ ನೋಡಿ…

ಹರಿಯಾಣ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿರೋ ವಿಡಿಯೋ ವೈರಲ್ ಆಗಿದೆ. ನಿನ್ನೆ ಹರಿಯಾಣದ ಮಹೇಂದ್ರಗಢದಲ್ಲಿ ರಾಹುಲ್ ಗಾಂಧಿ ಸಮಾವೇಶ ಆಯೋಜಿಸಲಾಗಿತ್ತು. ನಂತರ ಹೆಲಿಕಾಪ್ಟರ್​ನಲ್ಲಿ ವಾಪಸ್ ಆಗುವಾಗ ಹವಾಮಾನ ಕೈಕೊಟ್ಟಿದ್ದರಿಂದ ದೆಹಲಿಯಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೇ, ವಾಪಸ್ ಹರಿಯಾಣದ ರೇವರಿಯಲ್ಲಿ ಲ್ಯಾಂಡ್ ಮಾಡಲಾಯ್ತು. ಈ ವೇಳೆ ರಾಹುಲ್ ಗಾಂಧಿ ಅಲ್ಲಿದ್ದ ಮಕ್ಕಳು ಮತ್ತು ಯುವಕರೊಂದಿಗೆ ಕ್ರಿಕೆಟ್ ಆಡಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವಕರು ಮತ್ತು ಮಕ್ಕಳು ರಾಹುಲ್ ಗಾಂಧಿಗೆ ಬೌಲಿಂಗ್ ಮಾಡೋದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಕ್ರಿಕೆಟ್ ಆಡಿದ ಬಳಿಕ ಮಕ್ಕಳೊಂದಿಗೆ ರಾಹುಲ್ ಗಾಂಧಿ ಸಂವಾದ ಕೂಡ ನಡೆಸಿದ್ದಾರೆ. ನಂತರ ಹವಾಮಾನ ಸರಿಯಾಗದ ಹಿನ್ನೆಲೆಯಲ್ಲಿ ಪೈಲಟ್ ಸಲಹೆ ಮೇರೆಗೆ ರಾಹುಲ್ ಗಾಂಧಿ ರಸ್ತೆ ಮೂಲಕ ದೆಹಲಿಗೆ ಆಗಮಿಸಿದ್ದಾರೆ.

Contact Us for Advertisement

Leave a Reply