ಆಯುಧ ಪೂಜೆ ವಿರೋಧಿಸಿದವರಿಗೆ ರಾಜನಾಥ್ ಸಿಂಗ್ ಡಿಚ್ಚಿ

ಆಯುಧ ಪೂಜೆ ಬಗ್ಗೆ ಮಾತನಾಡಿದ್ದ ವಿಪಕ್ಷಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ಕೊಟ್ಟಿದ್ದಾರೆ. ದೆಹಲಿಗೆ ಬಂದಿಳಿದ ಬಳಿಕ ಮಾತನಾಡಿದ ಅವರು, ಯಾರು ಏನು ಬೇಕಾದರೂ ಹೇಳಲಿ. ನನಗೆ ಸರಿ ಅನಿಸಿದ್ದನ್ನು ನಾನು ಮಾಡಿದ್ದೇನೆ. ಇನ್ನು ಮುಂದೆಯೂ ಇದನ್ನು ಮುಂದುವರಿಸುತ್ತೇನೆ. ಕಾಣದ ಒಂದು ಶಕ್ತಿ ಇದ್ದು, ಅದನ್ನು ಚಿಕ್ಕ ವಯಸ್ಸಿಂದಲೂ ನಂಬಿಕೊಂಡು ಬಂದಿದ್ದೇನೆ ಎಂದಿದ್ದಾರೆ.

ಇನ್ನು ರಫೇಲ್ ಬಗ್ಗೆ ಮಾತನಾಡಿ, ಏಪ್ರಿಲ್, ಮೇ ಒಳಗೆ 7 ರಫೇಲ್ ವಿಮಾನಗಳು ಭಾರತಕ್ಕೆ ಬರಲಿವೆ. ಅದರ ವೇಗದ ಸಾಮಥ್ರ್ಯ ಪ್ರತಿ ಗಂಟೆಗೆ 1080 ಕಿಲೋಮೀಟರ್ ಗೆ ಏರಿಕೆಯಾಗಲಿದೆ. ನಾನು 1300 ಕಿಲೋಮೀಟರ್ ವೇಗದಲ್ಲಿ ರಫೇಲ್‍ನಲ್ಲಿ ಹಾರಾಟ ನಡೆಸಿದ್ದೇನೆ. ಇದರ ಶ್ರೇಯಸ್ಸು ಏನಿದ್ದರೂ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು ಎಂದಿದ್ದಾರೆ. ಜೊತೆಗೆ ನನ್ನ ಫ್ರಾನ್ಸ್ ಪ್ರವಾಸ ಯಶಸ್ವಿಯಾಗಿದ್ದು, ಇಮ್ಯಾನುವೆಲ್ ಮ್ಯಾಕ್ರೋನ್ ಅವರೊಂದಿಗೆ 35 ನಿಮಿಷ ಮಾತುಕತೆ ನಡೆಸಿದ್ದೇನೆ ಅಂದ್ರು.

Contact Us for Advertisement

Leave a Reply