ಆಸಿಯಾನ್​ನಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಹೇಳಿದ್ದೇನು?

masthmagaa.com:

ASEAN Defence Ministers’ Meeting-Plusನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ರು. ಈ ವೇಳೆ ಭಯೋತ್ಪಾದನೆ, ಮತೀಯವಾದ ಮತ್ತು ವಿಸ್ತರಣಾ ವಾದ ಜಗತ್ತಿನ ಮುಂದಿರೋ ಗಂಭೀರ ಸವಾಲುಗಳು.. ಇವುಗಳ ವಿರುದ್ಧ ಇಡೀ ಜಗತ್ತು ಒಂದಾಗಿ ಹೋರಾಟ ನಡೆಸಬೇಕು ಅಂತ ಕರೆ ಕೊಟ್ಟಿದ್ದಾರೆ. ಪಾಕಿಸ್ತಾನ ಗಡಿಯಲ್ಲಿ ಒಳನುಸುಳುವಿಕೆಗೆ ಯತ್ನಿಸ್ತಿದ್ದು, ಗಡಿಯಲ್ಲಿ ಶಾಂತಿ ಹಾಳು ಮಾಡ್ತಿದೆ ಅಂತ ವಾಗ್ದಾಳಿ ನಡೆಸಿದ್ರು. ಅಂದಹಾಗೆ ಈ ಆಸಿಯಾನ್ ಅಂದ್ರೆ Association of Southeast Asian Nations ಅಂದ್ರೆ ಆಗ್ನೇಯ ಏಷ್ಯಾ ದೇಶಗಳ ಒಂದು ಒಕ್ಕೂಟ.. ಇದ್ರಲ್ಲಿ ಬ್ರುನೆ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷಿಯಾ, ಮಯನ್ಮಾರ್, ಫಿಲಿಪ್ಪೀನ್ಸ್​, ಸಿಂಗಾಪುರ್​, ಥೈಲ್ಯಾಂಡ್ ಮತ್ತು ವಿಯೆಟ್ನಾಂ ದೇಶಗಳು ಆಸಿಯಾನ್​​ನ ಭಾಗವಾಗಿವೆ.

-masthmagaa.com

Contact Us for Advertisement

Leave a Reply