ಮತ್ತೆ ಶುರುವಾಯ್ತು ಸಾವರ್ಕರ್ ವಿವಾದ! ಯಾಕೆ..? ಏನು.?

masthmagaa.com:

ವಿ.ಡಿ.ಸಾವರ್ಕರ್ ದೇಶದ ಹೀರೋ ಅಂತ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸಾವರ್ಕರ್ ಕುರಿತ ಬುಕ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, 20ನೇ ಶತಮಾನದಲ್ಲಿ ಭಾರತ ಕಂಡ ಕಟ್ಟಾ ರಾಷ್ಟ್ರೀಯವಾದಿಗಳಲ್ಲಿ ಸಾವರ್ಕರ್ ಒಬ್ಬರು. ಮಹಾತ್ಮ ಗಾಂಧೀಜಿಯವರ ಮನವಿ ಮೇರೆಗೆ ಸಾವರ್ಕರ್ ಕ್ಷಮಾದಾನ ನೀಡುವಂತೆ ಬ್ರಿಟಿಷರಿಗೆ ಪತ್ರ ಬರೆದಿದ್ರು. ಆದ್ರೆ ಕೆಲವು ಮಾರ್ಕ್ಸ್​​​ವಾದಿ ಮತ್ತು ಲೆನಿನಿಸ್ಟ್ ಸಿದ್ಧಾಂತದ ಜನ ತಪ್ಪು ತಿಳಿದುಕೊಂಡಿದ್ದಾರೆ. ಅವರನ್ನು ಬಲಪಂಥೀಯ ಅಂತ ಹೇಳ್ತಾರೆ. ಆದ್ರೆ ಅದು ಸುಳ್ಳು.. ದೇಶವನ್ನು ಸ್ವಾತಂತ್ರ್ಯಗೊಳಿಸಲು ಸಾವರ್ಕರ್​ ಅವರ ಕಮಿಟ್​ಮೆಂಟ್ ಸ್ಟ್ರಾಂಗ್ ಆಗಿತ್ತು. ಆದೇ ಕಾರಣಕ್ಕೆ ಬ್ರಿಟಿಷರು ಅವರಿಗೆ ಎರಡೆರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿದ್ರು ಅಂತ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಇನ್ ಸ್ವಲ್ಪ ಟೈಮಲ್ಲೇ ಬಿಜೆಪಿ ವಿಡಿ ಸಾವರ್ಕರ್​​ರನ್ನು ರಾಷ್ಟ್ರಪಿತ ಅಂತ ಘೋಷಿಸ್ತಾರೆ ಅಂತ ಹೇಳಿದ್ದಾರೆ.

ಇದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿದ ವಿಡಿ ಸಾವರ್ಕರ್ ಮೊಮ್ಮಗ ರಂಜೀತ್ ಸಾವರ್ಕರ್​, ಗಾಂಧೀಜಿ ರಾಷ್ಟ್ರಪಿತ ಅಂತ ನಾನು ಭಾವಿಸೋದಿಲ್ಲ. ಭಾರತದಂತ ದೇಶದಲ್ಲಿ ಸಾವಿರಾರು ಹೋರಾಟಗಾರರನ್ನು ಮರೆಯಲಾಗಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply