ರಾಮಮಂದಿರ ನಿರ್ಮಾಣವಾಗುತ್ತೆ ಅನ್ನೋದು ಮುಸ್ಲಿಮರಿಗೂ ಗೊತ್ತು: RSS ನಾಯಕ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ಈ ಬಗ್ಗೆ ಮುಸ್ಲಿಂ ಸಮುದಾಯದ ದೊಡ್ಡ ವರ್ಗಕ್ಕೆ ಖಚಿತವಾಗಿದೆ ಎಂದು RSS ಚಿಂತಕ, ರಾಜ್ಯಸಭಾ ಸದಸ್ಯ ರಾಕೇಶ್ ಸಿಂಗ್ ಹೇಳಿದ್ದಾರೆ. ಅಲ್ಲದೆ ಅಯೋಧ್ಯೆಯ ಮಹತ್ವ ಮತ್ತು ಸಾಂಸ್ಕøತಿಕ ಪರಂಪರೆ ಬಗ್ಗೆ ತಿಳಿದುಕೊಂಡು, ನ್ಯಾಯಾಲಯದಿಂದ ತೀರ್ಪು ಹೊರಬೀಳುವ ಮುನ್ನವೇ ತಮ್ಮ ವಾದದಿಂದ ಹಿಂದೆ ಸರಿದಿದ್ದರೆ ಮುಸ್ಲಿಮರಿಗೆ ಒಳ್ಳೆಯದಾಗುತ್ತಿತ್ತು ಎಂದಿದ್ದಾರೆ.

ಇನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರತಿದಿನ ಅಯೋಧ್ಯೆ ಕುರಿತ ವಿಚಾರಣೆ ನಡೆಯುತ್ತಿದ್ದು, ಇದೇ ಅಕ್ಟೋಬರ್ 17ರೊಳಗೆ ವಿಚಾರಣೆ ಮುಗಿಸುವಂತೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಡೆಡ್‍ಲೈನ್ ಕೊಟ್ಟಿದ್ದಾರೆ. ಇದಾದ ಒಂದು ತಿಂಗಳ ಬಳಿಕ ತೀರ್ಪು ಕೂಡ ಹೊರಬೀಳುವ ಸಾಧ್ಯತೆ ಇದೆ.

Contact Us for Advertisement

Leave a Reply