ಆಕ್ಟಿಂಗ್‌ ಕ್ಲಾಸ್‌ ಸ್ಟಾರ್ಟ್‌ ಮಾಡಿ ಟ್ರೋಲ್‌ ಆದ “ರಾಖಿ ಸಾವಂತ್”

masthmagaa.com:

“ರಾಖಿ ಸಾವಂತ್‌” ಈ ಹೆಸರು ಯಾರ್‌ ಕೇಳಿಲ್ಲ ಹೇಳಿ. ಸದಾ ಒಂದಿಲ್ಲೊಂದು ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳೋ ಈ ಬಾಲಿವುಡ್‌ ನಟಿ ಈಗ ದುಬೈನಲ್ಲಿ ಆಕ್ಟಿಂಗ್‌ ಕ್ಲಾಸ್‌ನ್ನ ಒಪನ್‌ ಮಾಡಿದ್ದಾರೆ. ಇವರು ಆದೀಲ್‌ ಎನ್ನುವಂತ ಮೈಸೂರು ಮೂಲದ ಮುಸ್ಲಿಂ ಯುವಕನ ಜೊತೆ ಡೇಟಿಂಗ್‌ಲ್ಲಿದ್ರು. ನಂತರ ಇವರು ಮದುವೆ ಕೂಡ ಆಗಿದ್ರು. ಮದುವೆಯಾದ ಕೆಲವು ದಿನಗಳಲ್ಲೇ ಇವರ ಸಂಬಂಧ ಮುರಿದು ಬಿದ್ದಿತ್ತು. ನಂತರ ರಾಖಿ ಸಾವಂತ್‌ ಅವರು “ನನ್ನ ಪತಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ” ಅಂತ ಪೋಲಿಸ್‌ ಕಂಪ್ಲೇಂಟ್‌ ಕೊಟ್ಟಿದ್ರು. ಆ ದೂರಿನ ಅನ್ವಯ ಪೋಲಿಸರು ತನಿಖೆಯನ್ನ ಶುರು ಮಾಡಿದ್ರು. ಅದೇ ರೀತಿಯ ಇನ್ನೊಂದು ಕೇಸ್‌ ಮೈಸೂರಿನಲ್ಲಿ ಫೈಲ್‌ ಆಗಿತ್ತು. ಮೈಸೂರಿನ ಕೋರ್ಟ್‌ನಲ್ಲಿ ಸಾವಂತ್‌ ಅವರು “ಮದುವೆಯಾಗುವ ಸಂದರ್ಭದಲ್ಲಿ ಆದೀಲ್‌ ಮೈಸೂರು ಜನ ಕೆಟ್ಟವ್ರು, ನಂಗೆ ಇವ್ರ ಕಂಡ್ರೆ ಇಷ್ಟ ಇಲ್ಲ , ನಾನು ಮುಂಬೈಗೆ ಬರ್ತೀನಿ, ನಾನು ನೀನು ಮದುವೆಯಾಗೋಣ, ನಾನು ಒಂದು ಬಿಸನೆಸ್‌ ಮಾಡ್ತೀನಿ ನನಗೆ ಸ್ವಲ್ಪ ಹಣ ಸಹಾಯ ಮಾಡು ಅಂತ ಹೇಳಿದ್ದ. ನಾನೂ ಕೂಡ ಅವನನ್ನ ನಂಬಿ ಅವನಿಗೆ 1.65 ಕೋಟಿ ಹಣವನ್ನ ಕೊಟ್ಟಿದೀನಿ” ಅಂತ ಮುಂದೆ ಹೇಳಿದ್ರು. ಆದೀಲ್‌ಗೆ ಇನ್ನೊಂದು ಹುಡುಗಿನ ಜೊತೆ ಸಂಬಂಧ ಇದೆ ಅಂತ ರಾಖಿ ಸಾವಂತ್‌ ಹೇಳಿದ್ರು. ಇವಾಗ್ಲೂ ಅವರ ಕೇಸ್‌ ಕೋರ್ಟ್‌ನಲ್ಲಿ ನಡೀತಿದೆ. ಇದೆಲ್ಲ ನೋವನ್ನ ಸ್ವಲ್ಪಸ್ವಲ್ಪವೇ ರಾಖಿ ಮರೀತಾ ಇದಾರೆ. ಸದ್ಯ ಅವರು ದುಬೈನಲ್ಲಿ “ರಾಖಿ ಸಾವಂತ್‌ ಅಕಾಡೆಮಿ ಸ್ಕೂಲ್‌”ನ್ನು ಪ್ರಾರಂಭಿಸಿದ್ದಾರೆ. ಈ ಸ್ಕೂಲ್‌ನಲ್ಲಿ ಆಕ್ಟಿಂಗ್‌, ಮಾರ್ಷಲ್‌ ಆರ್ಟ್‌, ವೆಸ್ಟರ್ನ್‌ ಮತ್ತು ಕ್ಲಾಸಿಕಲ್‌ ಡಾನ್ಸ್‌ ಇವೆಲ್ಲದರ ಬಗ್ಗೆ ಟ್ರೇನಿಂಗ್‌ ಮಾಡಲಾಗತ್ತೆ ಅಂತ ರಾಖಿ ಸಾವಂತ್‌ ಹೇಳಿದ್ದಾರೆ. ಒಂದು ತಿಂಗಳ ಕೋರ್ಸ್‌ನಿಂದ ಹಿಡಿದು ಎರಡು ವರ್ಷದ ಕೋರ್ಸ್‌ ತನಕ ಈ ಅಕಾಡೆಮಿಯಲ್ಲಿ ಲಭ್ಯವಿದೆ. ಅಷ್ಟೆ ಅಲ್ಲದೇ ರಾಖಿ ಸಾವಂತ್‌ ಅವರ ಇನ್ಸ್ಟಾಗ್ರಾಮ್‌ ಖಾತೆ 10 ಮಿಲಿಯನ್‌ ಫಾಲೋವರ್ಸ್‌ನ್ನು ತಲುಪಿದೆ. ಸೋ ಈ ವಿಷಯ ತಿಳಿದ ಜನರು ” ಹೇಗೆ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗೋದು, ಹೇಗೆ ಟ್ರೋಲ್‌ ಆಗೋದು, ಟ್ರೋಲ್‌ ಆಗಿ ಹೇಗೆ ಫಾಲ್ಲೊವರ್ಸ್‌ಗಳನ್ನ ಜಾಸ್ತಿ ಮಾಡ್ಕೊಳ್ಳೊದು ಅನ್ನೋದ್ರ ಬಗ್ಗೆ ಹೇಳಿ ಕೊಡ್ತಾರೆ” ಅಂತ ತಮ್ಮ ಕಾಮೆಂಟ್‌ಗಳಲ್ಲಿ ಹೇಳ್ತಾ ಇದಾರೆ.

-masthmagaa.com

Contact Us for Advertisement

Leave a Reply