ನಾಮಪತ್ರ ಸಲ್ಲಿಕೆಗೆ ಲಕ್ಷ ಜನ..! ರಮೇಶ್ ಸವಾಲ್

ನಾಮಪತ್ರ ಸಲ್ಲಿಕೆ ವೇಳೆ 1 ಲಕ್ಷ ಜನ ಸೇರಿಸುತ್ತೇನೆ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಜನರು ಗೊಂದಲದಲ್ಲಿದ್ದಾರೆ. ಅದಕ್ಕಾಗಿಯೇ ಸಭೆ ನಡೆಸುತ್ತಿದ್ದೇವೆ. ಸುಪ್ರೀಂಕೋರ್ಟ್ ಮೇಲೆ ಸಂಪೂರ್ಣ ವಿಶ್ವಾಸವಿದೆ. ತೀರ್ಪು ಬಂದ ಬಳಿಕ ನಾಮಪತ್ರ ಸಲ್ಲಿಸುತ್ತೇನೆ. ಅದಕ್ಕೆ ಲಕ್ಷಕ್ಕೂ ಹೆಚ್ಚು ಜನ ಸೇರಿಸುತ್ತೇನೆ ಅಂದ್ರು. ಇನ್ನು ಗೋಕಾಕ್‍ನಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಲಖನ್ ಈಗ ಬದಲಾಗಿದ್ದಾರೆ. ಆದ್ರೆ ಅವನು ಈಗಲೂ ನನಗೆ ಪ್ರೀತಿಯ ತಮ್ಮ. ಚುನಾವಣೆಗೆ ನಿಲ್ಲಬೇಡ, ಮುಂದಿನ ಬಾರಿ ನಿಲ್ಲು ಎಂದು ಹೇಳುತ್ತೇನೆ. ಮುಂದಿನ ಬಾರಿ ನಿಂತರೆ ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಅಂತ ಹೇಳಿದ್ರು. ಇನ್ನು ನನ್ನ ಬಗ್ಗೆ ಮಾತನಾಡಲು ಯಾವುದೇ ಹಗರಣಗಳಿಲ್ಲ. ಹೀಗಾಗಿಯೇ ನನ್ನ ಅಳಿಯನ ಬಗ್ಗೆ ಮಾತನಾಡುತ್ತಾರೆ ಅಂತ ಟಾಂಗ್ ಕೊಟ್ರು.

Contact Us for Advertisement

Leave a Reply