ದೇಶವನ್ನ ಕಾಪಾಡಿಕೊಳ್ಳೋಕೆ ಒಟ್ಟು 12 ಬಿಲಿಯನ್‌ ನೆರವು: ಯುಕ್ರೇನ್‌ ಪ್ರಧಾನಿ

masthmagaa.com:

ರಷ್ಯಾ ಯುಕ್ರೇನ್‌ ಮೇಲೆ ಆಕ್ರಮಣ ಮಾಡಿದಾಗಿನಿಂದ ಇಲ್ಲಿಯವರೆಗೆ ಒಟ್ಟು 12 ಬಿಲಿಯನ್‌ ಅಂದ್ರೆ ಭಾರತದ ರೂಪಾಯಿಗಳಲ್ಲಿ ಸುಮಾರು 90 ಸಾವಿರ ಕೋಟಿಯಷ್ಟು ಮಿಲಿಟರಿ ಮತ್ತು ಹಣಕಾಸು ನೆರವು ಪಡೆದಿದೆ ಅಂತ ಯುಕ್ರೇನ್‌ ಪ್ರಧಾನಿ ಡೆನಿಸ್‌ ಶ್ಮಿಹಾಲ್‌ ಹೇಳಿದ್ದಾರೆ. ಪೋಲ್ಯಾಂಡ್‌ನ ರಾಜಧಾನಿ ವಾರ್ಸಾದಲ್ಲಿ ನಡೆದ ಸಮಾವೇಶ ಒಂದ್ರಲ್ಲಿ ಮಾತಾಡಿರೋ ಅವ್ರು, ಈ ಮಾಹಿತಿಯನ್ನ ನೀಡಿದ್ದಾರೆ. ಜೊತೆಗೆ ಸಮಾವೇಶದಲ್ಲಿ ಯುದ್ದದ ಸಮಯದಲ್ಲಿ ದೃಢವಾದ ಬೆಂಬಲ ನೀಡಿದಕ್ಕೆ ಧನ್ಯವಾದ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply