ನಂಗೆ ನಿಂಬೆ ಹಣ್ಣು ಅಂದ್ರಿ..ಈಗ..? ರೇವಣ್ಣ ಕೆಂಡ

ನಾನು ನಿಂಬೆ ಹಣ್ಣು ಹಿಡಿದುಕೊಂಡಿದ್ದಕ್ಕೆ ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡ್ತಿದ್ರು. ಈಗ ಕೇಂದ್ರ ರಕ್ಷಣಾ ಸಚಿವರು ರಫೇಲ್ ವಿಮಾನಕ್ಕೆ ಫ್ರಾನ್ಸ್‍ನಲ್ಲಿ ಲಿಂಬೆ ಹಣ್ಣುಇಟ್ಟು ಪೂಜೆ ಮಾಡಿದ್ದಾರೆ. ನನ್ನನ್ನು ನಿಂಬೆಹಣ್ಣು ರೇವಣ್ಣ ಎಂದಿದ್ದ ಬಿಜೆಪಿ ನಾಯಕರು ಈಗ ಮಾತನಾಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ. ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಮುಗಿಬಿದ್ದರು. ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ನಡೆಯಬೇಕಿದ್ದ 5 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಯಡಿಯೂರಪ್ಪ ತಡೆ ನೀಡಿದ್ದಾರೆ. ಬಿಜೆಪಿ ಮತ್ತು ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಮಾತ್ರವೇ ಕೆಲಸ ಮಾಡಿಸುತ್ತಿದ್ದಾರೆ. ದ್ವೇಷದ ರಾಜಕಾರಣ ಇನ್ನೂ ಬಿಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತೆ ಎಂದು ಹೇಳಿದ್ದಾರೆ.

Contact Us for Advertisement

Leave a Reply