masthmagaa.com:

ಕೃಷಿ ಕಾನೂನುಗಳನ್ನ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೀತಿರೋ ರೈತರ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಂಬಲ ವ್ಯಕ್ತವಾಗಿದೆ. ಇಂಟರ್​ನ್ಯಾಷನಲ್​ ಪಾಪ್ ಸ್ಟಾರ್​ ರಿಹಾನ್ನಾ ಟ್ವೀಟ್​ ಮಾಡಿ ಕೇಂದ್ರ ಸರ್ಕಾರದ ವಿರುದ್ಧದ ರೈತರ ಪ್ರತಿಭಟನೆಗೆ ಸಪೋರ್ಟ್ ಕೊಟ್ಟಿದ್ದಾರೆ. ಜನವರಿ 26ರ ಹಿಂಸಾಚಾರ ಬಳಿಕ ದೆಹಲಿ ಗಡಿಯಲ್ಲಿ ಇಂಟರ್​ನೆಟ್​​ ಬಂದ್​ ಮಾಡಿರುವ ಬಗ್ಗೆ ಸಿಎನ್​ಎನ್​ ಸುದ್ದಿಸಂಸ್ಥೆಯ ನ್ಯೂಸ್ ಆರ್ಟಿಕಲ್ ಒಂದನ್ನ ಟ್ವೀಟ್ ಮಾಡಿರೋ ರಿಹಾನ್ನಾ, ಯಾಕೆ ಯಾರೂ ಕೂಡ ಇದರ ಬಗ್ಗೆ ಮಾತಾಡ್ತಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. 32 ವರ್ಷದ ರಿಹಾನ್ನಾ ಅವರ ಈ ಟ್ವೀಟನ್ನ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, ಎರಡು ಲಕ್ಷಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

ಮತ್ತೊಂದುಕಡೆ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್​ಬರ್ಗ್​ ಕೂಡ ರೈತರ ಪ್ರತತಿಭಟನೆಗೆ ಬೆಂಬಲ ಕೊಟ್ಟಿದ್ದಾರೆ. ನಾವು ಭಾರತದಲ್ಲಿ ನಡೀತಿರೋ ರೈತರ ಪ್ರತಿಭಟನೆ ಪರವಾಗಿ ನಿಲ್ಲುತ್ತೇವೆ ಅಂತ ಗ್ರೇಟಾ ಥನ್​ಬರ್ಗ್​ ಟ್ವೀಟ್​ ಮಾಡಿದ್ದಾರೆ. ಇದರ ಬೆನ್ನಲ್ಲೇ ರಿಹಾನ್ನಾ ಮತ್ತು ಗ್ರೇಟಾ ಥನ್​ಬರ್ಗ್​​ ಟ್ವಿಟ್ಟರ್​​ನಲ್ಲಿ ಟ್ರೆಂಡ್ ಆಗಿಬಿಟ್ಟಿದ್ದಾರೆ. ಇಬ್ಬರು ಸೇರ್ಕೊಂಡು ಭಾರತದಲ್ಲಿ ನಡೀತಿರೋ ರೈತರ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ್ದಾರೆ.

ಇನ್ನು ರೈತರ ಪ್ರತಿಭಟನೆ ಬಗ್ಗೆ ಯಾಕೆ ಯಾರೂ ಮಾತಾಡ್ತಿಲ್ಲ ಅಂತ ಕೇಳಿರುವ ಗಾಯಕಿ ರಿಹಾನ್ನಾಳನ್ನ ಬಾಲಿವುಡ್​ ನಟಿ ಕಂಗನಾ ರನಾವತ್ ಫೂಲ್​ ಅಂತ ಕರೆದಿದ್ದಾರೆ. ಜೊತೆಗೆ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರೋರು ರೈತರಲ್ಲ. ಅವರು ದೇಶವನ್ನ ಡಿವೈಡ್​ ಮಾಡೋಕೆ ಟ್ರೈ ಮಾಡ್ತಿರೋ ಉಗ್ರರು. ಈ ಮೂಲಕ ಭಾರತದ ಮೇಲೆ ಚೀನಾ ಹಿಡಿತ ಸಾಧಿಸಿ ಅದನ್ನ ಅಮೆರಿಕದಂತೆ ಚೈನೀಸ್ ಕಾಲೋನಿ ಮಾಡಿಕೊಳ್ಳಬಹುದು. ಹೀಗಾಗಿ ರಿಹನ್ನಾ ಅವರೇ ನೀವು ಸುಮ್ನೆ ಕೂತ್ಕೊಳ್ಳಿ. ನಿಮ್ಮ ದೇಶದಂತೆ ನಾವು ನಮ್ಮ ದೇಶವನ್ನ ಮಾರಾಟ ಮಾಡಲ್ಲ ಅಂತ ಕಂಗನಾ ರನಾವತ್ ಖಡಕ್​ ಆಗಿ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೆ ಗ್ರೇಟಾ ಥನ್​ಬರ್ಗ್​​ರನ್ನ ‘ಫ್ಯಾನ್ಸಿ ಆ್ಯಕ್ಟಿವಿಸ್ಟ್’ ಅಂತ ಕರೆದಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗ ಪ್ರಗ್ಯಾನ್ ಓಜಾ ಟ್ವೀಟ್ ಮಾಡಿ, ‘ನಮಗೆ ಹೊರಗಿನವರು ಬೇಡ. ದೇಶದ ಆಂತರಿಕ ವಿಚಾರದಲ್ಲಿ ಅವರು ಮೂಗು ತೂರಿಸೋದು ಬೇಡ. ರೈತರ ಬಗ್ಗೆ ನನ್ನ ದೇಶಕ್ಕೆ ಹಮ್ಮೆ ಇದೆ. ಅವರ ಸಮಸ್ಯೆಯನ್ನ ಶೀಘ್ರದಲ್ಲೇ ಬಗೆಹರಿಸಲಾಗುತ್ತೆ ಅನ್ನೋ ನಂಬಿಕೆ ನನಗಿದೆ’ ಅಂತ ಪ್ರಗ್ಯಾನ್ ಓಜಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply