ಕೊರೋನಾ ಜೊತೆಯಲ್ಲೇ ಅಮೆರಿಕದಲ್ಲಿ ಆರ್​ಎಸ್​ ವೈರಸ್ ಹಾವಳಿ!

masthmagaa.com:

ಅಮೆರಿಕದಲ್ಲಿ ಕೊರೋನಾದ ಡೆಲ್ಟಾ ಹಾವಳಿ ಜಾಸ್ತಿಯಾಗ್ತಿರುವಾಗಲೇ ಆರ್​ಎಸ್​​ ವೈರಸ್ ಹಾವಳಿ ಶುರುವಾಗಿದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ವೈರಸ್ ಇದಾಗಿದ್ದು, ರೆಸ್ಪಿರೇಟರಿ ಸಿನ್ಸಿಶಿಯಲ್ ಅಂತ ಕೂಡ ಕರೆಯಲಾಗುತ್ತೆ. ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರೋ ಈ ವೈರಾಣು, ತುಂಬಾ ಸಾಂಕ್ರಾಮಿಕವಾಗಿದೆ. ಅಮೆರಿಕದ ಸೆಂಟರ್ ಫರ್ ಡಿಸೀಸ್ ಕಂಟ್ರೋಲ್​ & ಪ್ರಿವೆನ್ಶನ್​ ಪ್ರಕಾರ ಜೂನ್ ತಿಂಗಳ ಬಳಿಕ ಆರ್​​ಎಸ್​ ವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿದೆ. ಅಂದಹಾಗೆ ಜ್ವರ, ಮೂಗು ಸೋರುವಿಕೆ, ನೆಗಡಿ, ಕೆಮ್ಮು, ಸೀನು, ಕೆಮ್ಮಿನಂತ ಲಕ್ಷಣಗಳು ಕಂಡು ಬರುತ್ತವೆ. ಟೆಕ್ಸಾಸ್​ನಲ್ಲಿ ಮಕ್ಕಳ ವೈದ್ಯರಾಗಿರೋ ಹೈದರ್ ಹಾಕ್, ಹಲವು ತಿಂಗಳವರೆಗೆ ಈ ವೈರಸ್ ಮಕ್ಕಳಲ್ಲಿ ಪತ್ತೆಯಾಗಿರಲಿಲ್ಲ. ಇದೀಗ ಕೊರೊನಾ ಬಳಿಕ ಮಕ್ಕಳನ್ನು ಆರ್​​ಎಸ್​​ ವೈರಸ್ ಜೊತೆ ಆಸ್ಪತ್ರೆಗೆ ಕರೆದುಕೊಂಡು ಬರಲಾಗ್ತಿದೆ. ಈ ಮಕ್ಕಳ ವಯಸ್ಸು 2 ವಾರದಿಂದ 17 ವರ್ಷಗಳವರೆಗೆ ಇದೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ.. ಈ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಜಾಸ್ತಿಯಾಗುತ್ತಲೇ ಇದೆ. 2 ವಾರಗಳಲ್ಲಿ ಆರ್​​ಎಸ್​ ವೈರಸ್​​ 148 ಪರ್ಸೆಂಟ್​​ನಷ್ಟು ಜಾಸ್ತಿಯಾಗಿದೆ. ಆಸ್ಪತ್ರೆಗೆ ದಾಖಲಾಗ್ತಿರುವ ದರ 73 ಪರ್ಸೆಂಟ್ ಜಾಸ್ತಿಯಾಗಿದೆ. ಇದೇ ರೀತಿ ಮುಂದುವರಿದ್ರೆ ವೈರಸ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಬೆಡ್​​ಗಳ ಕೊರತೆಯೇ ಎದುರಾಗಬಹುದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply