ಪ್ರಧಾನಿ ಮೋದಿ ಬಗ್ಗೆ ಮಾಡಿದ್ದ ಟ್ವೀಟ್​​ ಡಿಲೀಟ್ ಮಾಡಿದ ಕಾಂಗ್ರೆಸ್!

masthmagaa.com:

ನಿನ್ನೆ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ತುಂಬಾ ಕೆಳಮಟ್ಟದಲ್ಲಿ ಟ್ವೀಟ್​​ವಾರ್ ನಡೆದಿತ್ತು. ಕಾಂಗ್ರೆಸ್​ ಅಂತೂ ಹೆಬ್ಬೆಟ್​ ಗಿರಾಕಿ ಮೋದಿ ಅನ್ನೋ ಹ್ಯಾಷ್​​ಟ್ಯಾಗ್ ಅಡಿಯಲ್ಲಿ ಹಲವು ಟ್ವೀಟ್​​ಗಳನ್ನ ಮಾಡಿ ಬಿಜೆಪಿಗೆ ತಿವಿದಿತ್ತು. ಇದೀಗ ಹೆಬ್ಬೆಟ್​ ಗಿರಾಕಿ ಮೋದಿ ಅನ್ನೋ ಹ್ಯಾಷ್​​ಟ್ಯಾಗ್ ಅಡಿಯಲ್ಲಿ ಮಾಡಿದ ಟ್ವೀಟ್​​ಗಳನ್ನ ಕಾಂಗ್ರೆಸ್​ ಡಿಲೀಟ್​ ಮಾಡಿದೆ. ಈ​ ಬಗ್ಗೆ ಮಾತನಾಡಿರೋ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ನಾನು ಸದಾ ಸಭ್ಯ ಭಾಷೆ ಪರವಾಗಿದ್ದೀನಿ. ಹೀಗಾಗಿ ಕರ್ನಾಟಕ ಕಾಂಗ್ರೆಸ್​​ನ ಟ್ವಿಟರ್ ಹ್ಯಾಂಡಲ್​​ನಿಂದ ಮಾಡಿದ ಈ ಎಳಸು ಟ್ವೀಟ್, ಅನಾಗರಿಕ ಟ್ವೀಟ್​​​ಗೆ ವಿಷಾದವಿರಲಿ. ಅದನ್ನ ನಾವು ತೆಗೆದುಹಾಕಿದ್ದೀವಿ ಎಂದಿದ್ದಾರೆ.

-masthmagaa.com

Contact Us for Advertisement

Leave a Reply