ಸಾನ್ಯಾ ಜೊತೆ ಫೋಟೊ ಹಂಚಿಕೊಂಡ ರೂಪೇಶ್‌ ಶೆಟ್ಟಿ: ಬೇಗ ಮದುವೆಯಾಗಿ ಎಂದ ಫ್ಯಾನ್ಸ್‌

masthmagaa.com:

ಬಿಗ್‌​ಬಾಸ್ ಸೀನ್ 9ರಲ್ಲಿ ಕಾಣಿಸಿಕೊಂಡ ಕ್ಯೂಟೆಸ್ಟ್ ಜೋಡಿ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಎಲ್ಲೆಡೆ ಫೇಮಸ್ ಆಗಿದ್ದಾರೆ. ಬಿಗ್​ ಬಾಸ್ ಒಟಿಟಿಯಿಂದ ಶುರುವಾದ ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ನಡುವಿನ ಸ್ನೇಹ ಬಿಗ್​ಬಾಸ್ ಮನೆಗೂ ಬಂದು ಸಖತ್ ಸುದ್ದಿ ಮಾಡಿತ್ತು. ಇವರಿಬ್ಬರ ಕೆಮಿಸ್ಟ್ರಿ ನೋಡಿ ಸಾಕಷ್ಟು ಫ್ಯಾನ್‌ ಪೇಜ್‌ಗಳು ಇವರಿಬ್ಬರ ಹೆಸರಿನಲ್ಲಿ ಸೃಷ್ಠಿಆದವು. ಸಾನ್ಯಾ ಹಾಗೂ ರೂಪೇಶ್ ಬಿಗ್​ ಬಾಸ್ ಮನೆಯಲ್ಲಿ ತುಂಬಾ ಕ್ಲೋಸ್ ಆಗಿದ್ದರು. ಇವರಿಬ್ಬರ ಜೋಡಿಯನ್ನು ಪ್ರೇಕ್ಷಕರು ಕೂಡಾ ಮೆಚ್ಚಿಕೊಂಡಿದ್ದರು.

“ನಾವಿಬ್ರೂ ಬೆಸ್ಟ್‌ ಫ್ರೆಂಡ್ಸ್‌” ಅಂತ ಎಷ್ಟೋ ಕಾರ್ಯಕ್ರಮಗಳಲ್ಲಿಈ ಜೋಡಿ ಹೇಳ್ಕೊಂಡಿದ್ರೂ ಕೂಡ ಅವರ ಅಭಿಮಾನಿಗಳು ಮಾತ್ರ ಇವರು ಮದುವೆ ಆಗಬೇಕು, ಇವರ ಜೋಡಿ ತುಂಬಾ ಚೆನ್ನಾಗಿದೆ ಅಂತ ಮಾತಾಡ್ಕೊಳ್ತಾರೆ. ಇದೆಲ್ಲದರ ನಡುವೆ ಸಾನ್ಯಾ ಮತ್ತು ರೂಪೇಶ್‌ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾನ್ಯಾ ರೂಪೇಶ್‌ ಅವರ ಫ್ಯಾಮಿಲಿಯನ್ನ ಮೀಟ್‌ ಮಾಡಿದ್ದಾರೆ. ಫ್ಯಾಮಿಲಿ ಜೊತೆಯಲ್ಲಿದ್ದ ಸಾನ್ಯಾ ಹಾಗೂ ರೂಪೇಶ್‌ ಅವರ ಫೋಟೊ ಎಲ್ಲಡೆ ವೈರಲ್‌ ಆಗ್ತಾ ಇದೆ. ಇನ್ನು ರೂಪೇಶ್‌ ಅವರು ಈ ಪೋಟೊವನ್ನ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇನ್ನು ಈ ಫೋಟೊದಲ್ಲಿ ಸಾನ್ಯಾ ಅವರ ತಾಯಿ ಕೂಡ ಇದ್ದಾರೆ. ಈ ಫೋಟೊ ನೋಡಿ ಅಭಿಮಾನಿಗಳು “ಬೇಗ ಮದುವೆಯಾಗಿ” ಅಂತ ಸಾಲು ಸಾಲು ಕಾಮೆಂಟ್‌ ಮಾಡ್ತಾ ಇದಾರೆ.

-masthmagaa.com

Contact Us for Advertisement

Leave a Reply