ರಷ್ಯಾ ಪರಮಾಣು ಅಸ್ತ್ರದ ಮೂಲಕ ಶಸ್ತ್ರಾಸ್ತ್ರ ಪೈಪೋಟಿಗೆ ಪ್ರೇರಣೆ: ಝೆಲೆನ್​ಸ್ಕಿ

masthmagaa.com:

ರಷ್ಯಾ ತನ್ನ ಬಳಿ ಇರೋ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಬಿಲ್ಡಪ್ ಕೊಟ್ಕೊಳ್ಳುವ ಮೂಲಕ ಶಸ್ತ್ರಾಸ್ತ್ರ ಪೈಪೋಟಿಗೆ ಕಾರಣವಾಗ್ತಿದೆ ಅಂತ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹೇಳಿದ್ದಾರೆ. ದೋಹಾ ಫೋರಂನಲ್ಲಿ ಮಾತಾಡಿದ ಅವರು, ಪರಮಾಣು ಶಸ್ತ್ರಾಸ್ತ್ರಗಳ ಮೂಲಕ ರಷ್ಯಾ ಯಾವುದೋ ದೇಶದ ನಾಶಕ್ಕೆ ಮುಂದಾಗ್ತಿಲ್ಲ. ಬದಲಿಗೆ ಇಡೀ ವಿಶ್ವದ ನಾಶಕ್ಕೆ ಮುಂದಾಗಿದೆ. ಈ ಹಿಂದೆ 1990ರ ದಶಕದಲ್ಲಿ ಯುಕ್ರೇನ್ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಪಡಿಸುವಾಗ, ಇಡೀ ವಿಶ್ವದ ಪವರ್​​ಫುಲ್ ದೇಶಗಳು ನಮಗೆ ಭದ್ರತೆಯ ಭರವಸೆ ನೀಡಿದ್ವು. ಅವುಗಳ ಪೈಕಿ ರಷ್ಯಾ ಕೂಡ ಒಂದಾಗಿತ್ತು. ಆದ್ರೆ ಆ ಭರವಸೆಗಳು ಈಗ ಈಡೇರದೆ ಉಳಿದುಕೊಂಡಿವೆ. ಆದ್ರೀಗ ಭದ್ರತೆಯ ಭರವಸೆ ನೀಡಿದ್ದ ದೇಶಗಳಲ್ಲೇ ಒಂದು ಯುಕ್ರೇನ್ ವಿರುದ್ಧ ಕೆಲಸ ಮಾಡೋಕೆ ಶುರು ಮಾಡಿದೆ. ಇದು ದೊಡ್ಡ ಅನ್ಯಾಯವಾಗಿದೆ ಅಂತ ಹೇಳಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ರಾಜಕೀಯ ಮತ್ತು ವ್ಯಾವಹಾರಿಕ ಸಭೆಗಳನ್ನು ಆಯೋಜಿಸೋ ಕತಾರ್​, ನ್ಯಾಚುರಲ್ ಗ್ಯಾಸ್ ಉತ್ಪಾದನೆ ಹೆಚ್ಚಿಸಬೇಕು. ಆ ಮೂಲಕ ರಷ್ಯಾಗೆ ಕೌಂಟರ್ ಕೊಡಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply