ರಷ್ಯಾ ಅಧ್ಯಕ್ಷ ಪುಟಿನ್​ ಟೀಕಾಕಾರನಿಗೆ ಜೈಲಿನಲ್ಲಿ ಟಾರ್ಚರ್​!

masthmagaa.com:

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಟೀಕೆ ಮಾಡಿ ಜೈಲು ಸೇರಿರೋ ಅಲೆಕ್ಸಿ ನಾವಲ್ನಿ ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾರೆ. ನನಗೆ ವೈದ್ಯರ ಅವಶ್ಯಕತೆ ಇದೆ, ನನ್ನಿಷ್ಟದ ವೈದ್ಯರನ್ನ ಭೇಟಿಯಾಗಲು ಬಿಡ್ತಿಲ್ಲ, ಸರಿಯಾದ ಚಿಕಿತ್ಸೆ ಕೊಡ್ತಿಲ್ಲ ಅಂತ ಆರೋಪ ಮಾಡಿರೋ ನಾವಲ್ನಿ, ನನಗೆ ವೈದ್ಯರನ್ನ ಭೇಟಿಯಾಗಲು ಅವಕಾಶ ಕೊಡೋವರೆಗೂ ಉಪವಾಸ ಮಾಡೋದಾಗಿ ಘೋಷಿಸಿದ್ದಾರೆ. ಈ ಸಂಬಂಧ ಅವರು ಬರೆದಿರೋ ಪತ್ರವೊಂದನ್ನ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಆದ್ರೆ ಜೈಲಿನ ಅಧಿಕಾರಿಗಳು ಮಾತ್ರ ನಾವಲ್ನಿ ಆರೋಗ್ಯ ಸ್ಥಿರವಾಗಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ತನ್ನನ್ನ ರಾತ್ರಿ ಮಲಗೋಕೂ ಬಿಡ್ತಿಲ್ಲ. ಪ್ರತಿ ಒಂದು ಗಂಟೆಗೂ ಜೈಲಿನ ಸಿಬ್ಬಂದಿ ಬಂದು ನನ್ನನ್ನ ಎಚ್ಚರಿಸುತ್ತಿದ್ದಾರೆ ಅಂತ ಕಳೆದ ವಾರ ನಾವಲ್ನಿ ಹೇಳಿದ್ದರು.

-masthmagaa.com

Contact Us for Advertisement

Leave a Reply