ರಷ್ಯಾದಿಂದ ಭಯಾನಕ ಅಸ್ತ್ರ: ಅಮೆರಿಕವನ್ನ ಹೊಡೆಯುತ್ತೆ ಎಂದ ಪುಟಿನ್

masthmagaa.com:

ಇದೇ ಮೊದಲಬಾರಿಗೆ ರಷ್ಯಾ ಸಬ್ ಮರೀನ್ ಮೂಲಕ ಲಾಂಚ್ ಮಾಡಲಾಗೋ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ನಡಿಸಿದೆ. ಹೈಪರ್ಸಾನಿಕ್ ಅಂದ್ರೆ ಶಬ್ಧದ ವೇಗಕ್ಕಿಂತ ಕನಿಷ್ಠ 5 ಪಟ್ಟು ಜಾಸ್ತಿ ವೇಗ ಅಂತ. ಇದು ಹೊಸ ಜೆನರೇಶನ್ ನ ಸರಿಸಾಟಿಯಿಲ್ಲದ ಶಸ್ತ್ರಾಸ್ತ್ರ ಅಂತ ವ್ಲಾದಿಮಿರ್ ಪುಟಿನ್ ಹಾಡಿಹೊಗಳಿದ್ದಾರೆ. ಬೇರೆಂಟ್ಸ್ ಸಮುದ್ರದಲ್ಲಿ ಸೆವೆರೋಡ್ವಿನ್ಸಕ್ ಜಲಂತರ್ಗಾಮಿ ಬಳಸಿ ಈ ಪ್ರಯೋಗ ನಡೆದಿದೆ. ಕ್ಷಿಪಣಿ ನೇರವಾಗಿ ಹೋಗಿ ಟಾರ್ಗೆಟ್ ಅನ್ನ ಪುಡಿಗಟ್ಟಿದೆ ಅಂತ ರಷ್ಯಾ ರಕ್ಷಣಾ ಇಲಾಖೆ ಹೇಳಿದೆ. ಈ ಹಿಂದೆ 2018ರಲ್ಲೇ ಈ ಕ್ಷಿಪಣಿ ಬಗ್ಗೆ ಪುಟಿನ್ ಅನೌನ್ಸ್ ಮಾಡಿದ್ರು. ಇದು ವಿಶ‌್ವದ ಯಾವುದೇ ಮೂಲೆಯಲ್ಲಿರೋ ಟಾರ್ಗೆಟನ್ನೂ ಬೇಧಿಸುತ್ತೆ. ಅಮೆರಿಕ ನಿರ್ಮಾಣ ಮಾಡಿಕೊಂಡಿರೋ ಕ್ಷಿಪಣಿ ನಿರೋಧಕ ಸಿಸ್ಟಮನ್ನೂ ಕಣ್ತಪ್ಪಿಸಿ ಇದು ದಾಳಿ ಮಾಡುತ್ತೆ ಅಂತ ಘೋಷಿಸಿದ್ರು. ಈಗ ಫೈನಲಿ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಗಾಗಿ ನಡೆದಿದೆ. ಸೋ ಇನ್ನು ಕೆಲವೇ ದಿನಗಳಲ್ಲಿ ಈ ಜಲಂತರ್ಗಾಮಿಯಿಂದ ಲಾಂಚ್ ಮಾಡಬಲ್ಲ ಹೈಪರ್ಸಾನಿಕ್ ಕ್ಷಿಪಣಿ ರಷ್ಯಾ ಸಶಸ್ತ್ರ ಪಡೆಗಳ ಬತ್ತಳಿಕೆ ಸೇರಲಿದೆ.

-masthmagaa.com

Contact Us for Advertisement

Leave a Reply