ಯುಕ್ರೇನ್ ಜೊತೆಗೆ ಸಂಘರ್ಷ! ನೌಕಾ ಸಮರಾಭ್ಯಾಸಕ್ಕೆ ರಷ್ಯಾ ಸಿದ್ಧತೆ

masthmagaa.com:

ಒಂದ್ಕಡೆ ರಷ್ಯಾ ಮತ್ತು ಯುಕ್ರೇನ್ ನಡುವಿನ ಸಂಘರ್ಷ ಜಾಸ್ತಿಯಾಗ್ತಿದ್ರೆ, ಮತ್ತೊಂದ್ಕಡೆ ರಷ್ಯಾ ದೊಡ್ಡಮಟ್ಟದ ನೌಕಾ ಸಮರಾಭ್ಯಾಸಕ್ಕೆ ಮುಂದಾಗಿದೆ. ಈ ತಿಂಗಳ ಅಂತ್ಯ ಮತ್ತು ಫೆಬ್ರುವರಿಯಲ್ಲಿ ಅಟ್ಲಾಂಟಿಕ್​, ಆರ್ಕಟಿಕ್, ಪೆಸಿಫಿಕ್ ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿ ನೌಕಾ ಸಮರಾಭ್ಯಾಸ ನಡೆಸೋದಾಗಿ ಘೋಷಿಸಿದೆ. ಇದ್ರಲ್ಲಿ 140 ಯುದ್ಧನೌಕೆ, 60 ಯುದ್ಧ ವಿಮಾನ ಮತ್ತು 10 ಸಾವಿರಕ್ಕೂ ಹೆಚ್ಚು ಯೋಧರು ಭಾಗಿಯಾಗಲಿದ್ದಾರೆ ಅಂತ ರಷ್ಯಾ ಹೇಳಿದೆ. ನಾಳೆ ಜಿನೇವಾದಲ್ಲಿ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕನ್, ರಷ್ಯಾ ವಿದೇಶಾಂಗ ಸಚಿವ ಸರ್ಜೀ ಲವ್​​​ರೋವ್​​ ಭೇಟಿಯಾಗಿ ಚರ್ಚಿಸಲಿದ್ದಾರೆ. ಇದ್ರ ನಡುವೆಯೇ ರಷ್ಯಾ ಈ ಘೋಷಣೆ ಮಾಡಿದೆ.

-masthmagaa.com

Contact Us for Advertisement

Leave a Reply