ಸಿನಿಮಾ ಶೂಟಿಂಗ್​​ಗೆ ಬಾಹ್ಯಾಕಾಶಕ್ಕೆ ಹಾರಿದ ರಷ್ಯಾದ ನಟಿ, ಡೈರೆಕ್ಟರ್!

masthmagaa.com:

ರಷ್ಯಾದ ನಟಿ ಮತ್ತು ಡೈರೆಕ್ಟರ್ ಸಿನಿಮಾ ಶೂಟಿಂಗ್​​ಗಾಗಿ ಬಾಹ್ಯಾಕಾಶಕ್ಕೆ ಹಾರಿದ್ಧಾರೆ. ನಿನ್ನೆ 37 ವರ್ಷದ ನಟಿ ಯುಲಿಯಾ ಪೆರೆಸಿಲ್ಡ್​ ಮತ್ತು 38 ವರ್ಷದ ನಿರ್ದೇಶಕ ಕ್ಲಿಮ್ ಶಿಪೆಂಕೋ ಅವರಿದ್ದ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಸ್ಪೇಸ್​ ಸ್ಟೇಷನ್​​ಗೆ ಡಾಕ್ ಆಗಿದೆ. ಸೋವಿಯತ್ ಒಕ್ಕೂಟದ ಸದಸ್ಯ ದೇಶವಾಗಿದ್ದ ಕಜಕಿಸ್ತಾನದಲ್ಲಿರೋ ಬೈಕಾನುರ್ ಕಾಸ್ಮೋಡ್ರೋಮ್​ ಬಾಹ್ಯಾಕಾಶ ಕೇಂದ್ರದಿಂದ ಸೋಯೂಜ್​ ಎಂಎಸ್​-19 ಸ್ಪೇಸ್​ಶಿಪ್​​ ವಿಮಾನದಲ್ಲಿ ಇವರು ಹೋಗಿದ್ದಾರೆ. ಇವರೊಂದಿಗೆ ಖ್ಯಾತ ಗಗನಯಾತ್ರಿ ಅಂಟೋನ್ ಶ್ಕಾಪ್ಲೆರೋವ್ ಕೂಡ ಇದ್ರು. 12 ದಿನಗಳ ಮಿಷನ್ ಇದಾಗಿದ್ದು, ಇಂಟರ್​ನ್ಯಾಷನಲ್ ಸ್ಪೇಸ್​ ಸ್ಟೇಷನ್​​​ನಲ್ಲಿ ದಿ ಚಾಲೆಂಜ್ ಅನ್ನೋ ಸಿನಿಮಾಗೆ ಕೆಲವೊಂದು ಸೀನ್​ಗಳ ಶೂಟಿಂಗ್ ನಡೆಯಲಿದೆ.

-masthmagaa.com

Contact Us for Advertisement

Leave a Reply