ರಷ್ಯಾದಲ್ಲಿ ಒಂದೇ ವರ್ಷ 10 ಲಕ್ಷ ಜನಸಂಖ್ಯೆ ಇಳಿಕೆ!

masthmagaa.com:

ರಷ್ಯಾದ ಜನಸಂಖ್ಯೆ 2021ರಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಅಂತ ಗೊತ್ತಾಗಿದೆ. ಅಂಕಿ ಅಂಶಗಳನ್ನ ಕೊಡವ ರೋಸ್​​​ಟ್ಯಾಟ್ ಪ್ರಕಾರ ಒಂದೇ ವರ್ಷ 10 ಲಕ್ಷದಷ್ಟು ಜನಸಂಖ್ಯೆ ಕಡಿಮೆಯಾಗಿದೆ. ಸೋವಿಯತ್ ಒಕ್ಕೂಟ ವಿಘಟನೆಯಾದ ಬಳಿಕ ಒಂದೇ ವರ್ಷ ಇಷ್ಟು ಜನಸಂಖ್ಯೆ ಇಳಿಕೆಯಾಗಿರೋದು ಇದೇ ಮೊದಲು ಅಂತ ಕೂಡ ಮಾಹಿತಿ ಸಿಕ್ಕಿದೆ. ಇದಕ್ಕೆ ಕೊರೋನಾ ಕೂಡ ಒಂದು ಕಾರಣ ಅಂತ ತಜ್ಞರು ಹೇಳಿದ್ದಾರೆ. ಈವರೆಗೆ ರಷ್ಯಾದಲ್ಲಿ ಕೊರೋನಾಗೆ 6.6 ಲಕ್ಷ ಮಂದಿ ಬಲಿಯಾಗಿದ್ದಾರೆ. ಇದು ರೋಸ್​ಟ್ಯಾಟ್ ಸಂಸ್ಥೆಯ ಲೆಕ್ಕ. ಆದ್ರೆ ರಷ್ಯಾ ಸರ್ಕಾರ.. ಸಾವಿಗೆ ಕೊರೋನಾ ಪ್ರಾಥಮಿಕ ಕಾರಣವಾಗಿದ್ರೆ ಮಾತ್ರ ಅದನ್ನು ಕೊರೋನಾ ಸಾವು ಅಂತ ಪರಿಗಣಿಸ್ತಿದೆ. ಹೀಗಾಗಿ ಸರ್ಕಾರಿ ವೆಬ್​ಸೈಟ್​ನಲ್ಲಿ ಸಾವಿನ ಸಂಖ್ಯೆ ಇನ್ನೂ ಕೂಡ 3.29 ಲಕ್ಷ ಮಾತ್ರ ಇದೆ.. 2020ರಲ್ಲಿ ಒಂದೇ ವರ್ಷ 5 ಲಕ್ಷ ಜನಸಂಖ್ಯೆ ಕಡಿಮೆಯಾಗಿತ್ತು. 2021ರಲ್ಲಿ ಇದೇ ಟ್ರೆಂಡ್ ಮುಂದುವರಿದಿದೆ. ರಷ್ಯಾದಲ್ಲಿ ಜನನ ದರ ಕೂಡ ಕಡಿಮೆಯಾಗುತ್ತಿದೆ. ಅಧ್ಯಕ್ಷ ಪುಟಿನ್ ಅವರ ಅಜೆಂಡಾಗಳಲ್ಲಿ ಜನಸಂಖ್ಯೆ ಹೆಚ್ಚಳ ಕೂಡ ಒಂದಾಗಿದೆ. ರಷ್ಯನ್ನರು ಹೆಚ್ಚೆಚ್ಚು ಮಕ್ಕಳಿಗೆ ಜನ್ಮ ನೀಡಿ, ಆರೋಗ್ಯಕರ ಜೀವನ ಶೈಲಿಯನ್ನು ಪಾಲಿಸಬೇಕು.. ಈ ಮೂಲಕ ಜನರ ಜೀವಿತಾವಧಿ ಕೂಡ ಜಾಸ್ತಿಯಾಗುತ್ತೆ ಅಂತ ಪುಟಿನ್ ಕರೆ ನೀಡಿದ್ರು. ನಮ್ಮ ದೇಶಕ್ಕೆ 14.6 ಕೋಟಿ ಜನಸಂಖ್ಯೆ ಸಾಕಾಗಲ್ಲ. ಇದ್ರಿಂದ ಕಾರ್ಮಿಕರ ಕೊರತೆ ಕೂಡ ಎದುರಾಗ್ತಿದೆ ಅಂತ ಕೂಡ ಪುಟಿನ್ ಹೇಳಿದ್ರು. ಒಂದಕ್ಕಿಂತ ಹೆಚ್ಚು ಮಕ್ಕಳು ಹೊಂದುವ ಪೋಷಕರಿಗೆ ಸರ್ಕಾರದಿಂದಲೂ ಇನ್ಸೆಂಟಿವ್​​, ಬೋನಸ್​​​ನ್ನು ನೀಡೋದಾಗಿ ಘೋಷಿಸಲಾಗಿತ್ತು. ಆದ್ರೂ ಜನಸಂಖ್ಯೆ ವೃದ್ಧಿಯಾಗಿಲ್ಲ..

-masthmagaa.com

Contact Us for Advertisement

Leave a Reply