ಅಮೆರಿಕದ ವಿರೋಧ! ಚೀನಾ- ರಷ್ಯಾ ಭಾಯಿ ಭಾಯಿ!

masthmagaa.com:
ಅಮೆರಿಕ ಯುಕ್ರೇನ್ ವಿಚಾರವಾಗಿ ರಷ್ಯಾದ ಜೊತೆ.., ಉಘರ್ ಮುಸ್ಲಿಮರ ವಿಚಾರವಾಗಿ ಚೀನಾದ ಜೊತೆ ವಿರೋಧ ಕಟ್ಟಿಕೊಳ್ತಾನೇ ಇದೆ. ಮತ್ತೊಂದ್ಕಡೆ ರಷ್ಯಾ ಮತ್ತು ಚೀನಾ ಫುಲ್ ಕ್ಲೋಸ್ ಆಗ್ತಿವೆ. ಹತ್ತಿರವಾಗ್ತಿವೆ. ಇದೀಗ ರಷ್ಯಾ ಅಧ್ಯಕ್ಷ ಪುಟಿನ್ ಚೀನಾದ ಶಿ ಜಿನ್​ಪಿಂಗ್​​ಗೆ ವಿಡಿಯೋ ಕಾಲ್ ಮಾಡಿ ಮಾತಾಡಿದ್ದಾರೆ. ಈ ವೇಳೆ ರಷ್ಯಾ ಮತ್ತು ಚೀನಾದ ಸಂಬಂಧವನ್ನು ಹಾಡಿ ಹೊಗಳಿರೋ ಪುಟಿನ್​​, ಫೆಬ್ರವರಿಯಲ್ಲಿ ನಡೆಯಲಿರೋ ವಿಂಟಲ್ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗೋದಾಗಿಯೂ ಘೋಷಿಸಿದ್ದಾರೆ. ಶಿ ಜಿನ್​ಪಿಂಗ್​ರನ್ನು ಪ್ರೀತಿಯ ಗೆಳೆಯ ಅಂತ ಕರೆದಿರೋ ಪುಟಿನ್, ಫೆಬ್ರವರಿ ಪ್ರವಾಸದ ವೇಳೆ ನೇರವಾಗಿ ಭೇಟಿಯಾಗೋದಾಗಿಯೂ ಮಾಹಿತಿ ನೀಡಿದ್ದಾರೆ. ಎರಡೂ ದೇಶಗಳ ಭದ್ರತೆ ಮತ್ತು ಹಿತಾಸಕ್ತಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಿಸಲು ಚೀನಾ ಮತ್ತು ರಷ್ಯಾ ಜೊತೆಯಾಗಿ ಕ್ರಮ ಕೈಗೊಳ್ಳಬೇಕು ಅಂತ ಹೇಳಿದ್ದಾರೆ. ಕಳೆದ ವಾರವಷ್ಟೇ ಜಿ7 ದೇಶಗಳ ವಿದೇಶಾಂಗ ಸಚಿವರು ಯುಕ್ರೇನ್ ವಿಚಾರದಲ್ಲಿ ರಷ್ಯಾದ ಆಕ್ರಮಣಕಾರಿ ನೀತಿ ಮತ್ತು ಹಾಂಗ್​​ಕಾಂಗ್​, ಶಿಂಜಿಯಾಂಗ್​​ನಲ್ಲಿ ಚೀನಾದ ದಬ್ಬಾಳಿಕೆ ಕುರಿತು ಚರ್ಚಿಸಿದ್ವು. ಚೀನಾದಲ್ಲಿ ನಡೆಯಲಿರೋ ವಿಂಟರ್ ಒಲಿಂಪಿಕ್ಸ್​​ಗೂ ಹಲವು ದೇಶಗಳು ಈಗಾಗಲೇ ರಾಜತಾಂತ್ರಿಕ ಬಹಿಷ್ಕಾರ ಹಾಕಿವೆ. ಆದ್ರೆ ಪುಟಿನ್ ನಾನೇ ಬರ್ತೀನಿ ಅಂತ ಹೇಳೋ ಮೂಲಕ ಪಾಶ್ಚಿಮಾತ್ಯ ದೇಶಗಳಿಗೆ ಸೆಡ್ಡು ಹೊಡೆದಿದ್ದಾರೆ. ಇವರಿಬ್ಬರು ನಾಯಕರನ್ನು ಕಳೆದ ವಾರ ಜೋ ಬೈಡೆನ್ ನಡೆಸಿದ ಪ್ರಜಾಪ್ರಭುತ್ವದ ಕುರಿತು ಶೃಂಗಸಭೆಯಿಂದಲೂ ಹೊರಗಿಡಲಾಗಿತ್ತು.
-masthmagaa.com

Contact Us for Advertisement

Leave a Reply