ಭಾರತದ ಟ್ರಾವೆಲ್ ಅಡ್ವೈಸರಿಯನ್ನು ಈಸಿ ಮಾಡಿದ ಅಮೆರಿಕ!

masthmagaa.com:

ಭಾರತದಲ್ಲಿ ಕೊರೋನಾ ಕೇಸಸ್​ ಸ್ವಲ್ಪ ಕಮ್ಮಿ ಇರೋ ಹಿನ್ನೆಲೆ ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್​ – CDC ಭಾರತದ ಟ್ರಾವೆಲ್ ಅಡ್ವೈಸರಿಯನ್ನ ಮತ್ತಷ್ಟು ಈಸಿ ಮಾಡಿದೆ. ಅಂದ್ರೆ ಲೆವೆಲ್ ಫೋರ್​ನಿಂದ ಲೆವೆಲ್​​ ಟುಗೆ ಇಳಿಸಿದೆ. ಲೆವೆಲ್​ ಟು ಅಂದ್ರೆ ಕೊರೋನಾ ಪರಿಸ್ಥಿತಿ ಮಧ್ಯಮ ಪ್ರಮಾಣದಲ್ಲಿದೆ, ಬಟ್​ ಸೇಫ್​ ಅಂತ. ಭಾರತದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಇದ್ದಾಗ ಲೆವೆಲ್​ ಫೋರ್​ನಲ್ಲಿ ಇಡಲಾಗಿತ್ತು. ಲೆವೆಲ್ ಫೋರ್ ಅಂದ್ರೆ ಅಮೆರಿಕ ಪ್ರಜೆಗಳು ಭಾರತಕ್ಕೆ ಹೋಗಬೇಡಿ ಅಂತ ಹೇಳಿತ್ತು. ಇನ್ನು ಇದರ ಜೊತೆಗೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ನಾಗರಿಕ ಅಶಾಂತಿ ಇರೋದ್ರಿಂದ ಅಮೆರಿಕನ್ನರು ಅಲ್ಲಿಗೆ ಹೋಗದಂತೆ ಹಾಗೂ ಭಾರತ ಪಾಕಿಸ್ತಾನ ಗಡಿಯ 10 ಕಿಲೋ ಮೀಟರ್ ಹತ್ತಿರಕ್ಕೆ ಹೋಗದಂತೆಯೂ ತನ್ನ ಪ್ರಜೆಗಳಿಗೆ ಸೂಚಿಸಿದೆ ಅಮೆರಿಕ.

-masthmagaa.com

Contact Us for Advertisement

Leave a Reply