ಮಾನ ಕಳೆದ ಕಮಾಲ್ ಖಾನ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ ಸಲ್ಲು ಭಾಯಿ!!

masthmagaa.com:

ಮುಂಬೈ: ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಫ್ಲಾಪ್ ಚಿತ್ರ “ರಾಧೆ” ಚಿತ್ರದ ಕುರಿತು ಅಸಮಂಜಸ ವಿಮರ್ಶೆ ಮಾಡಿದ ಕಮಾಲ್ ಖಾನ್ ವಿರುದ್ಧ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ರಾಧೆ ಚಿತ್ರ ಕಳಪೆಯಾಗಿ ಇದ್ದಿದೇನೋ ಹೌದು ಆದರೆ ವಿಮರ್ಶೆ ಮಾಡುವ ವೇಳೆ ನಟ ಕಮಾಲ್ ಖಾನ್ ಸಲ್ಮಾನ್ ಖಾನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದೇ ವಿಚಾರಕ್ಕೆ ಈಗ ನಟ ಸಲ್ಮಾನ್ ಖಾನ್ ಪರ ವಕೀಲರು ಮುಂಬೈ ನ್ಯಾಯಾಲಯದಲ್ಲಿ ಮಾನನಷ್ಟ ದೂರು ದಾಖಲಿಸಿ, ನೋಟಿಸ್ ಜಾರಿ  ಮಾಡಿದ್ದಾರೆ.

ಇನ್ನು ತಮಗೆ ನೋಟಿಸ್ ತಲುಪಿರುವ ಕುರಿತು ನಟ ಕಮಾಲ್ ಖಾನ್ ಕೂಡ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ‘ಸಲ್ಮಾನ್ ಖಾನ್ ರಾಧೆ ಅವರು ನನ್ನ “ರಾಧೆ” ಚಿತ್ರದ ವಿಮರ್ಶೆಗಾಗಿ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಪ್ರಕರಣ ತಿಳಿದ ಜನಸಾಮಾನ್ಯರು ಮಾತ್ರ ಮೊಕದ್ದಮೆ ಹೂಡಬೇಕಾಗಿದ್ದದ್ದು ಇಂಥ ಕಳಪೆ ಸಿನಿಮಾ ಮಾಡಿದ ಸಲ್ಮಾನ್ ಖಾನ್ ಮತ್ತು ರಾಧೆ ಚಿತ್ರ ಚಿತ್ರ ತಯಾರಕರ ಮೇಲೆ ಅಲ್ಲವೇ!? ಆದರೆ ಇಲ್ಲಿ ಕೇಸ್ ಉಲ್ಟಾ ಆಗಿದೆ, ಈ ‘ರಾಧೆ’ಯ ಬದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ “ನನ್ನರಸಿ ರಾಧೆ” ಸಾವಿರ ಪಾಲು ಸಹ್ಯವಾಗಿದೆ ಎಂದು ಕುಹಕವಾಡುತ್ತಿದ್ದಾರೆ.

-masthmagaa.com

Contact Us for Advertisement

Leave a Reply